ರಾಷ್ಟ್ರೀಯ

ಮದ್ಯದಂಗಡಿಯ ಕೂಲರ್‌ನಲ್ಲಿ ಅವಿತು ಬಿಯರ್‌ ಕದ್ದು ಕುಡಿದ!

Pinterest LinkedIn Tumblr


ಕುಡುಕರು ಮದ್ಯದ ಮಳಿಗೆಗಳಿಗೆ ಹೋಗಿ ಮದ್ಯದ ಬಾಟಲಿಗಳನ್ನು ಕದಿಯುವುದು ಹೊಸ ವಿಷಯವಲ್ಲ.ಆದರೆ ಮದ್ಯದ ಮಳಿಗೆಯ ಕೂಲರ್‌ನಲ್ಲಿಯೇ ಹೋಗಿ ಅವಿತುಕೊಳ್ಳುವುದು? 38 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅಮೆರಿಕದ ವಿಸ್ಕನ್ಸಿನ್‌ನ ಮದ್ಯದ ಮಳಿಗೆಯಲ್ಲಿದ್ದ ದೊಡ್ಡ ವಾಕ್‌ ಇನ್‌ ಬಿಯರ್‌ ಕೂಲರ್‌ನಲ್ಲಿ ಅವಿತು 18 ಔನ್ಸ್‌ ಐಸ್‌ ಹೌಸ್‌ ಬಿಯರ್‌ ಮತ್ತು 4 ಕ್ಯಾನ್‌ ಫೋರ್‌ ಲೊಕೊ ಬಿಯರ್‌ ಕದ್ದು ಕುಡಿದಿದ್ದಾನೆ. ಈತನ ಸುಳಿವು ಮಳಿಗೆಯ ಯಾರಿಗೂ ಸಿಕ್ಕಿಲ್ಲ. ಮರುದಿನ ಗ್ರಾಹಕರೊಬ್ಬರಿಗೆ ಕೂಲರ್‌ನಲ್ಲಿ ವ್ಯಕ್ತಿಯೊಬ್ಬ ಅವಿತು ಕುಳಿತಿರುವುದು ಕಂಡಿದೆ. ಆದರೆ ಬಿಯರ್‌ ಕದ್ದ ವ್ಯಕ್ತಿ ಹೇಳುವುದೇನೆಂದರೆ. ನಾನು ಕೂಲರ್‌ ಒಳಗೆ ಹೋಗುವುದಕ್ಕೂ, ಮಳಿಗೆ ಮುಚ್ಚುವುದಕ್ಕೂ ಸರಿ ಹೋಯಿತು. ನಾನು ಅಲ್ಲೇ ಉಳಿಯಬೇಕಾಯಿತು ಎಂದಿದ್ದಾನೆ.

ಆದರೆ ಮಳಿಗೆ ವ್ಯವಸ್ಥಾಪಕರು ಹೇಳುವುದೇ ಬೇರೆ. ನಾವು ಮಳಿಗೆಯಲ್ಲಿ ಯಾರೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡೇ ಮಳಿಗೆ ಬಾಗಿಲು ಹಾಕುವುದು. ಕೂಲರ್‌ ಒಳಗೆ ಹೋದ ವ್ಯಕ್ತಿ ರಕ್ಷಣೆಗಾಗಿ ಕೂಗಲೂ ಇಲ್ಲ. ಆತ ಕದಿಯಲೆಂದೇ ಹೋಗಿದ್ದು ಎಂದಿದ್ದಾರೆ.

-ಉದಯವಾಣಿ

Comments are closed.