ರಾಷ್ಟ್ರೀಯ

ಆಕ್ಸ್’ಫರ್ಡ್ ಇಂಗ್ಲಿಷ್ ಡಿಕ್ಷನರಿಯಲ್ಲಿ ಅಣ್ಣ ಸೇರಿ ಭಾರತದ 70 ಪದಗಳು ಸೇರ್ಪಡೆ

Pinterest LinkedIn Tumblr

ನವದೆಹಲಿ ಅ.27: ಕನ್ನಡ, ತಮಿಳು ಮತ್ತು ತೆಲಗು ಭಾಷೆಯಲ್ಲಿ ಹಿರಿಯ ಸಹೋದರನಿಗೆ ಬಳಸಲಾಗುವ ಅಣ್ಣ ಎಂಬ ಪದ ಸೇರಿದಂತೆ ಭಾರತದ ಒಟ್ಟು 70 ಪದಗಳನ್ನು ಅಂತಾರಾಷ್ಟ್ರೀಯ ನಿಘಂಟು ಎಂಬ ಖ್ಯಾತಿ ಪಡೆದಿರುವ ಆಕ್ಸ್’ಫರ್ಡ್ ಇಂಗ್ಲಿಷ್ ಡಿಕ್ಷನರಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಡಿಕ್ಷನರಿಗೆ ತೆಲಗು, ಉರ್ದು, ತಮಿಳು, ಹಿಂದಿ ಮತ್ತು ಗುಜರಾತ್ ಭಾಷೆ ಸೇರಿದಂತೆ ಒಟ್ಟು 70 ಪದಗಳು ಸೇರ್ಪಡೆಗೊಂಡಿವೆ. ಅಲ್ಲದೆ, ಉರ್ದು ಭಾಷೆಯ ಅಬ್ಬಾ-ಅಪ್ಪ, ಅಚ್ಚಾ- ಒಳ್ಳೆಯ, ಬಾಪು, ಬಡಾ ದಿನ್, ಬಚ್ಚಾ, ಸೂರ್ಯ ನಮಸ್ಕಾರ ಪದಗಳು ಸಹ ಡಿಕ್ಷನರಿಯಲ್ಲಿ ಸ್ಥಾನ ಗಳಿಸಿವೆ.

ಡಿಕ್ಷನರಿ ಸೇರಿದ ಇನ್ನು ಕೆಲವು ಪದಗಳೆಂದರೆ, ಬದ್ಮಾಷ್, ಚೂಡೀದಾರ್, ಡಾಬಾ, ದೀದಿ, ಮಸಾಲ, ಕೀಮಾ ಇತ್ಯಾದಿ.

Comments are closed.