ರಾಷ್ಟ್ರೀಯ

ಫತ್ವಾ ವಿರುದ್ಧ ಮುಸ್ಲಿಂ ಮಹಿಳೆ ಆಕ್ರೋಶ; ದಾರುಲ್ ಸಂಘಟನೆ ನಿಷೇಧಿಸಿ

Pinterest LinkedIn Tumblr


ವಾರಣಾಸಿ: ದೀಪಾವಳಿ ಸಂದರ್ಭದಲ್ಲಿ ಶ್ರೀರಾಮನಿಗೆ ಆರತಿ ಬೆಳಗಿದ್ದ ಮುಸ್ಲಿಂ ಮಹಿಳೆ ವಿರುದ್ಧ ಫತ್ವಾ ಹೊರಡಿಸಿದ್ದ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ದೇವಬಂದ್ ವಿರುದ್ಧ ಮುಸ್ಲಿಂ ಮಹಿಳಾ ಫೌಂಡೇಶನ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಇಂತಹ ಅಸಂಬದ್ಧ ಫತ್ವಾ ಹೊರಡಿಸುವ ದೇವಬಂದ್ ಅನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ.

ಅಕ್ಟೋಬರ್ 18ರಂದು ಮುಸ್ಲಿಂ ಮಹಿಳೆ ಆರತಿ ಬೆಳಗಿದ್ದರು. ಹಿಂದೂ ದೇವರಿಗೆ ಆರತಿ ಬೆಳಗಿರುವ ಮಹಿಳೆಯನ್ನು ಮುಸ್ಲಿಂ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಾರುಲ್ ಉಲೂಮ್ ಫತ್ವಾ ಹೊರಡಿಸಿತ್ತು.

ದಾರುಲ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ನಾಝ್ನೀನ್ ಅನ್ಸಾರಿ, ಇಸ್ಲಾಂ ಇಂತಹ ಆಚರಣೆಗಳಿಗೆ ಅವಕಾಶ ಕೊಡೋದಿಲ್ಲ, ಹೀಗಾಗಿ ಫತ್ವಾ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದರು.

 

-ಉದಯವಾಣಿ

Comments are closed.