ರಾಷ್ಟ್ರೀಯ

ತೆಲಂಗಾಣದಲ್ಲಿ ದೇವಾಲಯದ ಆರ್ಚಕರನ್ನು ಮದುವೆಯಾಗುವ ಯುವತಿಯರಿಗೆ ಸಿಗಲಿದೆ 3 ಲಕ್ಷ ರೂ ಕೊಡುಗೆ

Pinterest LinkedIn Tumblr

ಹೈದರಾಬಾದ್‌: ದೇವಸ್ಥಾನಗಳಲ್ಲಿ ಅರ್ಚಕರಾಗಿರುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 3 ಲಕ್ಷ ರೂ. ಕೊಡುಗೆ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. “ಕಲ್ಯಾಣಮಸ್ತು’ ಎನ್ನುವ ಹೆಸರಿನೊಡನೆ ಈ ಯೋಜನೆ ಮುಂದಿನ ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ.

ದೇವಸ್ಥಾನಗಳ ಅರ್ಚಕರು ಮತ್ತು ಪುರೋಹಿತರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಕನ್ಯಾಪಿತೃಗಳು ಹಿಂಜರಿಯುತ್ತಾರೆ. ಅರ್ಚಕರ ಆದಾಯ ಕಡಿಮೆ ಎನ್ನುವುದು ಒಂದು ಕಾರಣ ಎಂದು ಮನಗಂದ ಸರ್ಕಾರ, ಅರ್ಚಕರನ್ನು ವರಿಸಲು ಮುಂದಾದ ವಧುವಿಗೆ 3 ಲಕ್ಷ ಆಫ‌ರ್‌ ನೀಡುವುದಾಗಿ ಘೋಷಿಸಿದೆ. ಜತೆಗೆ , ಮದುವೆ ಖರ್ಚಿಗಾಗಿ 1 ಲಕ್ಷ ರೂ. ಹೆಣ್ಣಿನ ಮನೆಯವರಿಗೆ ನೀದಲು ಸರ್ಕಾರ ನಿರ್ಧರಿಸಿದೆ.

ವರನ ಆದಾಯವನ್ನೇ ಪ್ರಮುಖವಾಗಿ ನೋಡುವ ಯುವತಿಯರು, ಅವರ ಮನೆಯವರು ದೇವಸ್ಥಾನದ ಅರ್ಚಕರಿಗೆ ಹಾಗೂ ಪುರೋಹಿತರೊಡನೆ ವಿವಾಹವಾಗಲು ಸಮ್ಮತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರ್ಚಕರ ವಿವಾಹಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ದಂಪತಿಯ ಜಂಟಿ ಖಾತೆಯಲ್ಲಿ 3 ಲಕ್ಷ ರೂ.ಠೇವಣಿ ಇರಿಸುವ ನೂತನ ಯೋಜನೆಗೆ ತೆಲಂಗಾಣ ಸರ್ಕಾರ ಮುಂದಾಗಿದೆ.

ಯೋಜನೆ ಅನುಸಾರ ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ವಧು-ವರರ ಹೆಸರಿ ನಲ್ಲಿ ಜಂಟಿ ಖಾತೆ ತೆರೆದು ಮೂರು ವರ್ಷಗಳ ಅವಧಿಗೆ 3 ಲಕ್ಷ ರೂ. ಠೇವಣಿ ಇರಿಸಲಾಗುವುದು. ಇದಕ್ಕಾಗಿ ಅರ್ಚಕರಿಗೆ ತಮ್ಮ ಪುತ್ರಿಯನ್ನು ವಿವಾಹ ಮಾಡಿಕೊಡಲು ಇಚ್ಛಿಸುವ ಪೋಷಕರು ವಧು ಹಾಗೂ ವರನ ವಿವರಗಳೊಂದಿಗೆ ಈ ಯೋಜನೆಯ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬೇಕು. ಯೋಜನೆ ಎಷ್ಟು ಜೋಡಿಗಳಿದ್ದರೂ ಅನ್ವಯವಾಗುತ್ತದೆ. ಪ್ರತಿ ಜೋಡಿಗೆ ಮದುವೆ ಸಹಾಯಧನ ಹಾಗೂ ವಿವಾಹ ವೆಚ್ಚದ ಹಣ ನೀದಲಾಗುತ್ತದೆ.

ರಾಜ್ಯದಲ್ಲಿನ ಎಲ್ಲಾ 4,805 ದೇವಾಲಯದ ಅರ್ಚಕರು ಸರ್ಕಾರಿ ನೌಕರರಂತೆಯೇ ಸರ್ಕಾರ ನಿಗದಿ ಪಡಿಸಿದ ವೇತನ ಪಡೆಯಲಿದ್ದಾರೆ. ಇದರಿಂದಾಗಿ ಅರ್ಚಕರಿಗೂ ಇತರೆ ವೃತ್ತಿಯವರಂತೆ ಗೌರವಯುತ ಸ್ಥಾನಮಾನ ಸಿಗಲಿದೆ ಎಂದು ಮೂಲಗಳು ತಿಳಿಸಿದೆ.

Comments are closed.