ರಾಷ್ಟ್ರೀಯ

ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ: ಪತ್ನಿ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ.

23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ 2017 ಮೇ ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಕೆಲ ತಿಂಗಳ ನಂತರ ಪತಿ ಮತ್ತು ಆತನ ತಂದೆ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.

ಮದುವೆ ವೇಳೆ ಶ್ವೇತಾ ಪೋಷಕರು 4 ಲಕ್ಷ ರೂ. ಕ್ಯಾಶ್ ಮತ್ತು 10 ತೊಲಾ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆ ಬಳಿಕ ಇನ್ನೂ ವರದಕ್ಷಿಣೆಯನ್ನು ನೀಡುವದಾಗಿ ಭರವಸೆಯನ್ನು ನೀಡಿದ್ದರು.

ಈ ದಂಪತಿ ಮಿಯಾಪುರದಿಂದ ವಿಕರಾಬಾದ್‍ನ ಸಿರಿಪುರಂಗೆ ಸೆಪ್ಟಂಬರ್‍ನಲ್ಲಿ ಹೋಗಿ ವಾಸವಾಗಿದ್ದಾರೆ. ಅಲ್ಲಿ ಪತಿಯ ಪೋಷಕರು ಶ್ವೇತಾಗೆ ಮಾಂಸವನ್ನು ತಿನ್ನವಂತೆ ಬಲವಂತ ಮಾಡಿದ್ದಾರೆ. ಶ್ವೇತಾ ಸಸ್ಯಹಾರಿ ಆಗಿದ್ದರಿಂದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಾರೆ. ಆದರೆ ಪತಿ ಬಿಡದೇ ಅವರ ಮುಂದೆ ಮಾಂಸ ಇಟ್ಟು ತಿನ್ನುವಂತೆ ಬಲವಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿದ್ದಾರೆ.

ಗಂಡನ ಮನೆಯವರ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಶ್ವೇತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Comments are closed.