ರಾಷ್ಟ್ರೀಯ

‘ಸರ್ವಾಧಿಕಾರಿ ವರ್ತನೆ’ ಖಂಡಿಸಿ ಸತ್ಯಜಿತ್ ರೇ ಚಲನಚಿತ್ರ ಸಂಸ್ಥೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

Pinterest LinkedIn Tumblr


ಕೋಲ್ಕತಾ: ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಸ್ ಆರ್ ಎಫ್ ಟಿಐ) ವಿದ್ಯಾರ್ಥಿ ಸಂಘ, ಕಠಿಣ ನಿಯಮ ಹಾಗೂ ಹೊರಹಾಕುವ ಬೆದರಿಕೆ ಹಾಕುತ್ತಿರುವ ತಮ್ಮ ಸಂಸ್ಥೆಯ ವಿರುದ್ಧ ಮಂಗಳವಾರ ಪ್ರತಿಭಟನೆ ಆರಂಭಿಸಿದೆ.
ಹಾಸ್ಟೆಲ್ ವಿಭಜನೆಗೆ ಸಂಬಂಧಿಸಿದಂತೆ 14 ಮಹಿಳೆಯರನ್ನು ಹೊರಹಾಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಪ್ರತಿಭಟನೆ ಆರಂಭಿಸಿದ್ದು, ಸಂಸ್ಥೆಯ ‘ಸರ್ವಾಧಿಕಾರಿ ವರ್ತನೆ’ಯನ್ನು ಖಂಡಿಸಿದ್ದಾರೆ.
ಕಳೆದ 25 ವರ್ಷಗಳಿಂದ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದರು. ಆದರೆ ರಾತ್ರೋರಾತ್ರಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಬೇರೆ ಬೇರೆ ಮಾಡಿದ್ದು, ಸಂಸ್ಥೆಯ ಈ ದಿಢೀರ್ ನಿರ್ಧಾರಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪುರುಷ ವಿದ್ಯಾರ್ಥಿಗಳನ್ನು ಒಂದು ಹಾಸ್ಟೆಲ್ ಗೆ ಸ್ಥಳಾಂತರಿಸಲಾಗಿದ್ದು, ಮತ್ತೊಂದು ಕಟ್ಟಡಕ್ಕೆ ವಿದ್ಯಾರ್ಥಿನಿಯರನ್ನು ಸ್ಥಳಾಂತರಿ ಮಹಿಳಾ ಹಾಸ್ಟೆಲ್ ಎಂದು ಬೋರ್ಡ್ ಹಾಕಲಾಗಿದೆ.
ಇದೊಂದು ಚಲನಚಿತ್ರ ಶಾಲೆ ಮತ್ತು ಎಸ್ ಆರ್ ಎಫ್ ಟಿಐ ಒಂದು ಪ್ರಗತಿಪರ, ಉದಾರ ಅಭಿಪ್ರಾಯಗಳುಳ್ಳ ಸ್ಥಳವಾಗಿದೆ. ಇಲ್ಲಿ ಅಂತಹ ಯಾವುದೇ ಕಾನೂನುಗಳು ಇರಲಿಲ್ಲ. ಈಗ ದಿನಕ್ಕೊಂದು ಕಾನೂನು ಜಾರಿಗೆ ತರುತ್ತಿದ್ದು, ನಮ್ಮ ಅಭಿಪ್ರಾಯಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಉಚ್ಚಾಟಿತ ವಿದ್ಯಾರ್ಥಿ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳ ರಕ್ಷಣೆ ಮತ್ತು ಭದ್ರತೆ ದೃಷ್ಟಿಯಿಂದ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಆಡಳಿತ ಮಂಡಳಿ ಹೇಳುತ್ತಿದೆ.

Comments are closed.