ರಾಷ್ಟ್ರೀಯ

52 ಲಕ್ಷ ಹಣದೊಂದಿಗೆ ಪಾಕ್ ಗೆ ಪರಾರಿಯಾದ ಖಾಸಗಿ ಕಂಪನಿಯ ಕ್ಯಾಶಿಯರ್

Pinterest LinkedIn Tumblr


ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ಒಬ್ಬ ಸುಮಾರು 52 ಲಕ್ಷ ರೂಪಾಯಿಗಳನ್ನ ಎತ್ತಿಕೊಂಡು ಪಾಕಿಸ್ತಾನಕ್ಕೆ ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಮುಂಬೈ ಮೂಲದ ಫಾರೂಕ್ ಬ್ಯಾಟರಾಯನಪುರದ ಯುನೈಟೆಡ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯಲ್ಲಿ ಕ್ಯಾಷಿಯರ್ ಆಗಿದ್ದ. ಕಂಪನಿ ನೀಡಿದ್ದ ಕ್ವಾಟ್ರಸ್`ನಲ್ಲಿ ವಾಸವಿದ್ದ ಫಾರೂಕ್ ಇಬ್ರಾಹಿಂ 2 ದಿನದ ಕಲೆಕ್ಷನ್ ಹಣವನ್ನ ಹೊತ್ತೊಯ್ದಿದ್ದಾನೆ.

ಕರಾಚಿಗೆ ತೆರಳುವ ಮುನ್ನ ಮುಂಬೈಗೆ ತೆರಳಿ ಮಗನಿಗೆ 30 ಲಕ್ಷ ರೂಪಾಯಿ ನೀಡಿದ್ದಾನೆ. ಫಾರೂಕ್ ಜಾಡು ಹಿಡಿದ ಬ್ಯಾಟರಾಯನಪುರ ಪೊಲೀಸರು ಪಾರೂಕ್ ಪುತ್ರ ಇರ್ಫಾನ್`ನನ್ನ ಬಂಧಿಸಿದ್ದಾರೆ. ಫಾರೂಕ್ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಫಾರೂಕ್`ಗೆ ಮೂವರು ಮಕ್ಕಳಿದ್ದು, ಅವರ ಮೇಲೂ ನಿಗಾ ಇಡಲಾಗಿದೆ.

ಲುಕೌಟ್ ನೋಟಿಸ್ ಹಿನ್ನೆಲೆಯಲ್ಲಿ ವಿಮಾನ, ರೈಲು, ಬಸ್ ನಿಲ್ದಾಣಗಳಲ್ಲೂ ತಪಾಸಣೆ ನಡೆಸಲಾಗುತ್ತೆ. ಪಾಕಿಸ್ತಾನದ ರಾಯಭಾರ ಕಚೇರಿಗೂ ಮಾಹಿತಿ ನೀಡಲಾಗಿದೆ.

Comments are closed.