ರಾಷ್ಟ್ರೀಯ

ಮತ್ತೆ ಉಗ್ರ ಮಸೂದ್ ಅಜರ್ ಬೆಂಬಲಕ್ಕೆ ನಿಂತ ಚೀನಾ; ಅಮೆರಿಕ ಯತ್ನಕ್ಕೆ ಅಡ್ದಗಾಲು

Pinterest LinkedIn Tumblr


ನವದೆಹಲಿ: ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಆದರೆ ಈ ಬಾರಿ ಚೀನಾ ಅಡ್ಡಿ ಉಂಟು ಮಾಡಿರುವುದು ಅಮೆರಿಕಾಗದ ಪ್ರಸ್ತಾವನೆಗೆ ಎಂಬುದು ವಿಶೇಷ.
ಭಾರತದ ಪ್ರಸ್ತಾವನೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಬೆಂಬಲಿಸಿದ್ದು, ಉಗ್ರ ಮಸೂದ್ ಅಜರ್ ನ್ನು ಜಾಗರಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದ ಅಮೆರಿಕಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಉಗ್ರ ಮಸೂದ್ ಅಜರ್ ನ್ನು ಉಗ್ರರ ಪಟ್ಟಿಗೆ ಸೇರಿಸುವ ಬಗ್ಗೆ ಭಾರತದೊಂದಿಗೆ ಚರ್ಚಿಸಿದ್ದ ನಂತರ ಅಮೆರಿಕ ವಿಶ್ವಸಂಸ್ಥೆ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ವಿಶ್ವಸಂಸ್ಥೆಗೆ ಮನವಿಯನ್ನೂ ಸಲ್ಲಿಸಿತ್ತು. ಮನವಿಗೆ ಆಕ್ಷೇಪ ಸಲ್ಲಿಸಲು ಅಥವಾ ಮನವಿಯನ್ನು ತಡೆಹಿಡಿಯಲು 10 ದಿನಗಳ ಕಾಲಾವಕಾಶ ಮುಕ್ತಾಯಗೊಳ್ಳುವುದರೊಳಗೆ ಚೀನಾ ಅಮೆರಿಕಾದ ಮನವಿಯನ್ನು ತಡೆಹಿಡಿದಿದೆ.
ಅಮೆರಿಕಾದ ಮನವಿಯನ್ನು ಚೀನಾ ತಡೆಹಿಡಿದಿರುವುದು 6 ತಿಂಗಳು ಮುಂದುವರೆಯಲಿದ್ದು, ಮತ್ತೆ 3 ತಿಂಗಳ ವರೆಗೆ ಅದನ್ನು ವಿಸ್ತರಿಸಬಹುದಾಗಿದೆ. ಈ ಅವಧಿಯಲ್ಲಿ ಚೀನಾ ಸಂಪೂರ್ಣವಾಗಿ ಮನವಿಯನ್ನು ವಿರೋಧಿಸಿದರೆ ಪ್ರಸ್ತಾವನೆ ಅಸ್ತಿತ್ವ ಕಳೆದುಕೊಳ್ಳಲಿದೆ.

Comments are closed.