ರಾಷ್ಟ್ರೀಯ

ರಾಜಧಾನಿ ದೆಹಲಿ ಸೇರಿದಂತೆ ಭಾರತದ ಹಲವೆಡೆ ಲಘು ಭೂಕಂಪನ: 5.8ರಷ್ಟು ತೀವ್ರತೆ ದಾಖಲು

Pinterest LinkedIn Tumblr

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಸೋಮವಾರ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

ದೆಹಲಿ, ಉತ್ತರಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತಾರಾಖಂಡಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಕಳೆದ ರಾತ್ರಿ 10.30ರ ವೇಳೆ ಸುಮಾರು 30 ಸೆಕೆಂಡ್ ಗಳ ಕಾಲ ಭೂಕಂಪನದ ಅನುಭವವಾಗಿದ್ದು, ಪ್ರಾಣಭೀತಿಯಿಂದ ಜನರು ಮನೆ, ಕಚೇರಿ ಬಿಟ್ಟು ಹೊರಗೆ ಓಡಿದ್ದಾರೆ. ಭೂಕಂಪದ ತೀವ್ರತೆ 5.8ರಷ್ಟು ದಾಖಲಾಗಿದೆ.

ಭೂಕಂಪನದ ಕೇಂದ್ರ ಉತ್ತರಾಖಂಡದ ಪಿತೋರ್ ಘಡದಲ್ಲಿ 21 ಕಿ.ಮೀ ಆಳದಲ್ಲಿ ಕಂಡುಬಂದಿದೆ. ಭೂಕಂಪನದಲ್ಲಿ ಯಾವುದೇ ಆಸ್ತಿ, ಪ್ರಾಣ ಹಾನಿಗಳು ಸಂಭವಿಸಿಲ್ಲ

Comments are closed.