ರಾಷ್ಟ್ರೀಯ

ಶಶಿಕಲಾ ಅಕ್ರಮ ಆಸ್ತಿ ಪ್ರಕರಣ: ಇನ್ನೊಂದು ವಾರದಲ್ಲಿ ಸುಪ್ರೀಂ ತೀರ್ಪು

Pinterest LinkedIn Tumblr


ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಹಾಗೂ ಅವರ ಆ‍ಪ್ತೆ ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮೇಲ್ಮನವಿ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್‌ ಇನ್ನೊಂದು ವಾರದಲ್ಲಿ ನೀಡಲಿದೆ.

ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ರಾಜ್ಯ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ್ದ ದುಷ್ಯಂತ್ ದಾವೆ ಅವರು ಕೋರ್ಟ್‌ ಕಾಯ್ದಿರಿಸಿದ್ದ ತೀರ್ಪಿನ ಕುರಿತು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ ಹಾಗೂ ತೀರ್ಪು ಹೊರಬೀಳುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲಿ ತೀರ್ಪು ಪ್ರಕಟಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಕಾಯ್ದಿರಿಸಿದ ತೀರ್ಪಿನ್ನು ಪ್ರಕಟಿಸಲು ಒಂದು ವಾರ ಕಾಯಿರಿ ಎಂದು ಪೀಠದ ನ್ಯಾಯಮೂರ್ತಿ ಪಿ.ಸಿ. ಘೋಸೆ ಅವರು ರಾಜ್ಯ ಪರ ಹಿರಿಯ ವಕೀಲ ದುಷ್ಯಂತ್‌ ದಾವೆ ಅವರಿಗೆ ತಿಳಿಸಿದೆ.

ಜಯಲಲಿತಾ ಅವರ ಸಾವಿನ ಬಳಿಕ ಸಿಎಂ ಸ್ಥಾನಕ್ಕೇರಲು ಸಕಲ ಸಿದ್ಧತೆ ಮಾಡಿಕೊಂಡಿರುವ ಶಶಿಕಲಾ ಅವರಿಗೆ ಸುಪ್ರೀಂ ಕೋರ್ಟ್‌ನ ತೀರ್ಪು ಯಾವ ಪರಿಣಾಮ ಬೀರಲಿದೆ ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Comments are closed.