ರಾಷ್ಟ್ರೀಯ

ಬಜೆಟ್‍ನಲ್ಲಿ ಆದಾಯ ತೆರಿಗೆಯ ಕೆಲವು ಬದಲಾವಣೆಗಳು….

Pinterest LinkedIn Tumblr

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನ ಘೋಷಿಸಿದ್ದಾರೆ.

ನೋಟ್ ನಿಷೇಧವಾದ ಬಳಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ 4 ಲಕ್ಷಕ್ಕೆ ಏರಿಸಬಹುದು ಎನ್ನುವ ನಿರೀಕ್ಷೆ ಇತ್ತು.

ಆದಾಯ ತೆರಿಗೆಗೆ ಯಾರಿಗೆ ಎಷ್ಟು?
– 2.5 ಲಕ್ಷದಿಂದ 5 ಲಕ್ಷದ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಕಡಿತ(ಕಳೆದ ಬಾರಿ ಶೇ. 10 ರಷ್ಟಿತ್ತು )
– 5 ಲಕ್ಷದಿಂದ 10 ಲಕ್ಷಕ್ಕೆ – ಶೇ.20ರಷ್ಟು ತೆರಿಗೆ
– 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ – ಶೇ.30ರಷ್ಟು ತೆರಿಗೆ

50 ಲಕ್ಷದಿಂದ 1 ಕೋಟಿ ವರೆಗಿನ ಆದಾಯಕ್ಕೆ ಶೇ.10 ಸರ್‍ಚಾರ್ಜ್ ಹೇರಿದರೆ, 1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಈಗಿರುವ ಶೇ. 15 ಸರ್ಚಾರ್ಜ್ ಮುಂದುವರಿಯಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

Comments are closed.