ರಾಷ್ಟ್ರೀಯ

ಬಜೆಟ್’ನಲ್ಲಿ ಕೃಷಿ ಸಾಲಕ್ಕೆ 10 ಲಕ್ಷ ಕೋಟಿ ರೂಪಾಯಿ ಮೀಸಲು ! ರೈತರಿಗೆ ಬಂಪರ್ ಆಫರ್ ಘೋಷಿಸಿದ ಜೇಟ್ಲಿ

Pinterest LinkedIn Tumblr

ನವದೆಹಲಿ : ‘ಉತ್ತಮ ಉದ್ದೇಶ ಎಂದಿಗೂ ವಿಫಲವಾಗುವುದಿಲ್ಲ’ ಎಂಬ ಮಹಾತ್ಮ ಗಾಂಧಿಯ ಹೇಳಿಕೆನ್ನು ಉಲ್ಲೇಖಿಸಿ ಬಜೆಟ್ ಆರಂಭಿಸಿದ ಅರುಣ್ ಜೇಟ್ಲಿ, ಕೃಷಿಕರಿಗೆ ಭರ್ಜರಿ ಯೋಜನೆಗಳನ್ನು ಘೋಷಿಸಿದ್ದಾರೆ. ಕೃಷಿ ಜೇಟ್ಲಿ ಬಜೆಟ್’ನಲ್ಲಿ ಕೃಷಿ ಸಾಲಕ್ಕೆ 10 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.

ದೇಶದ ಬೆನ್ನೆಲುಬು ರೈತರನ್ನು ಶ್ಲಾಘಿಸಿದ್ದಾರೆ. ಭಾರತೀಯ ರೈತ ಪ್ರಸಕ್ತ ವರ್ಷದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಬಿತ್ತನೆ ಹೆಚ್ಚಾಗಿದೆ. ಉತ್ತಮ ಮುಂಗಾರಿನಿಂದ ಕೃಷಿ ಕ್ಷೇತ್ರ ಈ ವರ್ಷ ಶೇ. 4.1 ರಷ್ಟು ಅಭಿವೃದ್ಧಿಯಾಗುವ ನಿರೀಕ್ಷೆಯಿದೆ.

ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಮುಂದಿನ 5 ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧರಾಗಿದ್ದೇವೆ. 2017-18 ನೇ ಸಾಲಿನಲ್ಲಿ ರೈತರಿಗೆ ದಾಖಲೆ ನಿರ್ಮಾಣ ಪ್ರಮಾಣದಲ್ಲಿ 10 ಲಕ್ಷ ಕೋಟಿ ರೂ ಮೊತ್ತ ಸಾಲವನ್ನು ನೀಡಲಾಗುವುದು. ಜಮ್ಮು ಕಾಶ್ಮೀರ ಸೇರಿದಂತೆ ಪೂರ್ವ ರಾಜ್ಯಗಳ ರೈತರಿಗೆ ಸಹಕಾರಿ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ 60 ದಿನಗಳವರೆಗೆ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದಿದ್ದಾರೆ.

Comments are closed.