ರಾಷ್ಟ್ರೀಯ

ಭಾರತದಲ್ಲಿ ಹೆಚ್ಚುತ್ತಿದೆ ಪುರುಷರ ವೀರ್ಯದ ಬೇಡಿಕೆ ! ಯಾರ ವೀರ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ ಗೊತ್ತಾ..?

Pinterest LinkedIn Tumblr

ಇತ್ತೀಚಿನ ವರದಿಗಳ ಪ್ರಕಾರ ಪುರುಷರ ವೀರ್ಯದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪುರುಷರ ವೀರ್ಯ 370 ಡಾಲರ್‌ಗಳಿಂದ 890 ಡಾಲರ್‌ನಷ್ಟು ಬೆಲೆ ಇದೆಯಂತೆ.

ಕಳೆದ ಕೆಲವು ವರ್ಷಗಳ ಹಿಂದೆ ದಂಪತಿಗಳು ಗುಣಮಟ್ಟದ ಪುರುಷನ ವೀರ್ಯಕ್ಕೆ 200 ಡಾಲರ್‌ ನೀಡಿದ ಉದಾಹರಣೆಗಳೂ ಇವೆ. ದಿನ ಕಳೆದಂತೆ ಪುರುಷರ ವೀರ್ಯಕ್ಕೂ ಬೇಡಿಕೆ ಹೆಚ್ಚುತ್ತಲೇ ಇರುವುದು ಅಚ್ಚರಿಯ ಬೆಳವಣಿಗೆ.

ಭಾರತದಂಥ ದೇಶದಲ್ಲಿಯೂ ಸಿಕ್ಕಾಪಟ್ಟೆ ಡಿಮಾಂಡ್‌:
ನಮ್ಮ ದೇಶದಲ್ಲೂ ಪುರುಷರ ವೀರ್ಯದ ಬೇಡಿಕೆ ಕಮ್ಮಿಯಿಲ್ಲ. ಇದರ ಬೆಲೆ ಆಸ್ಪತ್ರೆಗಳಿಂದ ಆಸ್ಪತ್ರೆಗೆ ಬದಲಾಗುತ್ತ ಹೋಗುತ್ತದೆ. ಕೆಲ ವರ್ಷಗಳ ಹಿಂದೆ 1200 ರೂಪಾಯಿಗಳಿಂದ 1500 ರೂ. ವರೆಗೆ ಇರುತ್ತಿದ್ದ ಬೆಲೆ, ನಂತರದ ದಿನಗಳಲ್ಲಿ 2000 ರೂಪಾಯಿಗಳಿಂದ 5000 ರೂ.ವರೆಗೆ ಇದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಅದರಲ್ಲೂ ಇಂಜನಿಯರಿಂಗ್‌ ಅಥವಾ ವೈದ್ಯಕೀಯ ಪದವೀಧರನ ವೀರ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ.

Comments are closed.