ರಾಷ್ಟ್ರೀಯ

ಅಸುರಕ್ಷಿತ ಗರ್ಭಪಾತದಿಂದ ಭಾರತದಲ್ಲಿ ಪ್ರತಿದಿನ 10 ಮಹಿಳೆಯರ ಸಾವು: ತಜ್ಞರು

Pinterest LinkedIn Tumblr


ಜೈಪುರ: ಅಸುರಕ್ಷಿತ ಗರ್ಭಪಾತದಿಂದ ಭಾರತದಲ್ಲಿ ಪ್ರತಿದಿನ 10 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ವಾರ್ಷಿಕವಾಗಿ 68 ಲಕ್ಷ ಮಹಿಳೆಯರು ಗರ್ಭಪಾತ ಸಂಭವಿಸುತ್ತಿದ್ದು, ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 40,000 ಸಾವಿರ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದಾರೆ. ಅಸುರಕ್ಷಿತ ಗರ್ಭಪಾತ, ತಾಯಂದಿರ ಸಾವಿಗೆ ಕಾರಣವಾಗುತ್ತಿರುವ 3ನೇ ಪ್ರಮುಖ ಕಾರಣವಾಗಿದ್ದು, ಶೇ.8 ರಷ್ಟು ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಐಪಿಎಎಸ್ ಡೆವಲಪ್ ಮೆಂಟ್ ಫೌಂಡೇಷನ್(ಐಡಿಎಫ್) ಯೋಜನಾ ನಿರ್ವಾಹಕ ಕರುಣಾ ಸಿಂಗ್ ಹೇಳಿದ್ದಾರೆ.
ಐಪಿಎಎಸ್ ಸಂಘಟನೆ ಅಸುರಕ್ಷಿತ ಗರ್ಭಪಾತದಿಂದ ಸಂಭವಿಸಬಹುದಾದ ಸಾವುಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ. ವಾರ್ಷಿಕವಾಗಿ 68 ಲಕ್ಷ ಗರ್ಭಪಾತ ಸಂಭವಿಸುತ್ತಿದೆ, ಈ ಪೈಕಿ ಶೇ.80 ರಷ್ಟು ಮಹಿಳೆಯರಿಗೆ ಭಾರತದಲ್ಲಿ ಗರ್ಭಪಾತ ಕಾನೂನುಬದ್ಧ ಎಂಬುದು ತಿಳಿದಿಲ್ಲ. ಆದ್ದರಿಂದ ಗರ್ಭಪಾತ ಮಾಡಿಸುವಾಗ ಸೂಕ್ತವಲ್ಲದ ರೀತಿಯಲ್ಲಿ ಗರ್ಭಪಾತಕ್ಕೆ ಮುಂದಾಗುತ್ತಾರೆ. ಪ್ರತಿ ವರ್ಷ ರಾಜಸ್ಥಾನದಲ್ಲಿ 30 ಸಾವಿರದಿಂದ 40 ಸಾವಿರ ಗರ್ಭಪಾತ ಸಂಭವಿಸುತ್ತವೆ, ಬಹುತೇಕ ಪ್ರಕರಣಗಳಲ್ಲಿ ಹೆಣ್ಣು-ಗಂಡು ಭ್ರೂಣಗಳ ಆಯ್ಕೆಯೇ ಗರ್ಭಪಾತಕ್ಕೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.
2015 ರಲ್ಲಿ ಕೇಂದ್ರ ಸರ್ಕಾರ ಸುರಕ್ಷಿತ ಗರ್ಭಪಾತಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಭಾರತದಲ್ಲಿ ಶೇ.90 ರಷ್ಟು ಗರ್ಭಪಾತಗಳು ವೈದ್ಯಕೀಯ, ಸಾಮಾಜಿಕ-ಆರ್ಥಿಕ ಕಾರಣಗಳಿಂದಾಗಿ ಸಂಭವಿಸುತ್ತದೆ. ಸುರಕ್ಷಿತ ಗರ್ಭಪಾತಕ್ಕೆ ಪ್ರಿಕನ್ಸೆಪ್ಷನ್- ಪ್ರಿನಟಾಲ್ ಡಯಾಗ್ನೋಸ್ಟಿಕ್ ತಂತ್ರಗಳನ್ನು(ಪಿಸಿ&ಪಿಎನ್ ಡಿಟಿ) 1994 ರ ಕಾಯ್ದೆಯನ್ನು ಜಾರಿಗೆ ತಂದು ಸುರಕ್ಷಿತ ಗರ್ಭಪಾತ ಸೇವೆಗಳ ನೀಡುವ ಅಗತ್ಯವಿದೆ ಎಂದು ತಜ್ಞರು ನೀಡಿರುವ ಸಂಶೋಧನಾ ವರದಿ ಅಭಿಪ್ರಾಯಪಟ್ಟಿದೆ.

Comments are closed.