ರಾಷ್ಟ್ರೀಯ

ಅವಿವಾಹಿತ ತಂಗಿ ಗರ್ಭಿಣಿಯಾದಾಗ ಸಹೋದರ ಮಾಡಿದ್ದೇನು…?

Pinterest LinkedIn Tumblr


ಬಿಹಾರ(ಜ.15): ಇನ್ನೂ ಮದುವೆಯಾಗದ ನನ್ನ ತಂಗಿ ಮಗುವಿಗೆ ಜನ್ಮ ನೀಡಿದ್ರೆ ಜನರು ಏನು ಹೇಳ್ಬಹುದು? ನಾನು ಸಮಾಜದಲ್ಲಿ ಬಾಳಿ ಬದುಕುವುದು ಹೇಗೆ? ಹಲವು ಬಾರಿ ಬೇಡವೆಂದರೂ ತನ್ನ ಪ್ರಿಯತಮನನ್ನು ಭೇಟಿಯಾಗುತ್ತಿದ್ದಳು, ಇಂದು ಅದ್ಯಾವ ಪರಿಸ್ಥಿತಿ ಎದುರಾಗಿದೆ ಎಂದರೆ ಈ ಸಮಸ್ಯೆಯಿಂದ ಹೊರ ಬರಲು ನಾನೇನಾದರೂ ಮಾಡಲೇಬೇಕಿದೆ. ಈ ಎಲ್ಲಾ ಯೋಚನೆಗಳು ಸಹೋದರನೊಬ್ಬ ತಂಗಿಯ ವಿರುದ್ಧ ಭಯಾನಕ ಸಂಚೊಂದನ್ನು ರಚಿಸಿ ತನ್ನ ಮೇಲೆ ಅನುಮಾನ ಮೂಡದಂತೆ ಕೆಲಸ ಮುಗಿಸಿದ್ದ. ಆದರೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಬಿಹಾರದ ಲಕ್ಷ್ಮೀಪುರ ಎಂಬ ಹಳ್ಳಿಯಲ್ಲಿ ನಡೆದಿದ್ದು, ಈ ಹತ್ಯೆಯ ಹಿಂದಿನ ಸಂಚು ಆರೋಪಿಯಾಗಿರುವ ಯುವತಿಯ ಸಹೋದರ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ ಬಳಿಕ ಬಯಲಾಗಿದೆ. ಈ ಕುರಿತಾಗಿ ಮಾತನಾಡಿದ ಪೊಲೀಸರು ‘ ಊರಿನ ಜನರೆದುರು ತನ್ನ ಮರ್ಯಾದೆ ಉಳಿಸಿಕೊಳ್ಳಲು ಈತ ಇನ್ನಿಬ್ಬರೊಡನೆ ಕೈ ಮಿಲಾಯಿಸಿ ತನ್ನ ತಂಗಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಒಪ್ಪಿದ್ದಾನೆ. ಹೀಗಾಗಿ ಈತನಿಗೆ ಸಹಾಯ ಮಾಡಿದ ಸಹಚರರನ್ನೂ ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

Comments are closed.