ರಾಷ್ಟ್ರೀಯ

ಅಮೆರಿಕದ ಆನ್‍ಲೈನ್ ಮಾರಾಟ ಸಂಸ್ಥೆಯಲ್ಲಿ ನಾಯಿಮರಿಗಳಿಗೆ ಹಾಕುವ ಟೀಶರ್ಟ್ ನಲ್ಲಿ ಭಾರತದ ತ್ರಿವರ್ಣ ಧ್ವಜ

Pinterest LinkedIn Tumblr


ನವದೆಹಲಿ: ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಕಾಲೊರಸು (ಡೋರ್‌ ಮ್ಯಾಟ್‌) ಮಾರಾಟಕ್ಕಿಟ್ಟು ಇ–ಕಾಮರ್ಸ್‌ ಸಂಸ್ಥೆ ‘ಅಮೆಜಾನ್ ಕೆನಡಾ’ ವಿವಾದಕ್ಕೊಳಗಾಗಿತ್ತು. ಆದರೆ ಅಮೆಜಾನ್ ಕೆನಡಾ ಮಾತ್ರವಲ್ಲ ಅಮೆಜಾನ್ ಅಮೆರಿಕ ಭಾರತದ ತ್ರಿವರ್ಣ ಧ್ವಜವಿರುವ ಶೂ, ಶೂಲೇಸ್‍ಗಳನ್ನು ಮಾರಾಟ ಮಾಡುತ್ತಿದೆ.

ಲಾಸ್ ಏಂಜಲೀಸ್ ಮೂಲದ ಎನ್‍.ವೈ.ಎಲ್.ಎ ಕಂಪನಿ ಚುಕ್ಕಾ ಕಾನ್ವಾಸ್ ಶೂ ಅಮೆಜಾನ್‍ನಲ್ಲಿ ಮಾರಾಟಕ್ಕಿಟ್ಟಿದೆ. ಈ ಶೂ ಬೆಲೆ 43.99 ಡಾಲರ್ (ಅಂದಾಜು ₹3,000) ಆಗಿದೆ. ಶೂ ಲೇಸ್‍ ಓವಲ್ ಚಾರ್ಮ್ ಡೆಕೊರೇಷನ್‌ ಎಂಬ ಉತ್ಪನ್ನದಲ್ಲಿಯೂ ಭಾರತದ ಧ್ವಜದ ಚಿತ್ರಿವಿದೆ.

ಅಮೆಜಾನ್ ಅಮೆರಿಕ ವೆಬ್‍ಸೈಟ್‍ನಲ್ಲೀಗ ತ್ರಿವರ್ಣ ಧ್ವಜದ ಚುಕ್ಕಾ ಕಾನ್ವಾಸ್ ಶೂ ಜಾಹೀರಾತು ಲಭ್ಯವಿಲ್ಲ. ಆದರೆ ತ್ರಿವರ್ಣ ಧ್ವಜದ ಶೂ ಲೇಸ್ ಡೆಕೊರೇಷನ್‌ ಉತ್ಪನ್ನ ಲಭ್ಯವಿದೆ.

ಅಮೆಜಾನ್ ಸಂಸ್ಥೆ ಮಾತ್ರವಲ್ಲ ಅಮೆರಿಕದ ಆನ್‍ಲೈನ್ ಮಾರಾಟ ಸಂಸ್ಥೆಯಾದ ಕೆಫೆ ಫ್ರೆಸ್‍ನಲ್ಲಿ ನಾಯಿಮರಿಗಳಿಗೆ ಹಾಕುವ ಟೀಶರ್ಟ್ ನಲ್ಲಿ ಭಾರತದ ರಾಷ್ಟ್ರೀಯ ಲಾಂಛನ ಪ್ರಿಂಟ್ ಮಾಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ರಾಷ್ಟ್ರೀಯ ಲಾಂಛನವನ್ನು ಈ ರೀತಿ ಉತ್ಪನ್ನಗಳಲ್ಲಿ ಬಳಸುವುದು ಅಪರಾಧವಾಗಿದೆ.

ಕೆಫೆ ಪ್ರೆಸ್ ವೆಬ್‍ಸೈಟ್‍ಲ್ಲಿ Indian Flag ಎಂಬ ಕೀ ವರ್ಡ್ ಸರ್ಚ್ ಮಾಡಿದರೆ ಭಾರತದ ರಾಷ್ಟ್ರಧ್ವಜ, ರಾಷ್ಟ್ರೀಯ ಲಾಂಛನವಿರುವ ಟೀ ಶರ್ಟ್, ಸ್ಟಿಕ್ಕರ್ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ.

Comments are closed.