ರಾಷ್ಟ್ರೀಯ

ಬೆಳಗಿನ ಯೋಗಾಭ್ಯಾಸವನ್ನು ಬಿಟ್ಟು ತಾಯಿಯನ್ನು ಭೇಟಿ ಮಾಡಿ ಉಪಹಾರ ಸೇವಿಸಿದ ಪ್ರಧಾನಿ ಮೋದಿ

Pinterest LinkedIn Tumblr

ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗಿನ ಯೋಗಾಭ್ಯಾಸವನ್ನು ಬಿಟ್ಟು ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಹೀಗಂತ ಸ್ವತಃ ಪ್ರಧಾನಿಯೇ ಟ್ವೀಟ್ ಮಾಡಿದ್ದಾರೆ.

”ಯೋಗಭ್ಯಾಸ ಮಾಡುವುದನ್ನು ಬಿಟ್ಟು ನನ್ನ ತಾಯಿಯನ್ನು ಭೇಟಿ ಮಾಡಲು ಹೋದೆ. ಮುಂಜಾನೆಗೂ ಮುನ್ನ ಅವರೊಡನೆ ಬೆಳಗಿನ ಉಪಾಹಾರ ಸೇವಿಸಿದೆ. ಅವರೊಂದಿಗೆ ಕಳೆದ ಸಮಯ ಅದ್ಭುತವಾಗಿತ್ತು ಎಂದು ಟ್ವಿಟ್ಟರ್ ನಲ್ಲಿ ಪ್ರಧಾನಿ ಹೇಳಿಕೊಂಡಿದ್ದಾರೆ.

ಮೋದಿಯವರ ಕಿರಿ ಸೋದರ ಪಂಕಜ್ ಮೋದಿ ಜೊತೆ 97 ವರ್ಷದ ತಾಯಿ ಹೀರಾಬೆನ್ ಗಾಂಧಿನಗರದ ಹೊರವಲಯದಲ್ಲಿ ವಾಸಿಸುತ್ತಿದ್ದಾರೆ.

ನಿನ್ನೆ ಗುಜರಾತ್ ಗೆ ಆಗಮಿಸಿದ ನರೇಂದ್ರ ಮೋದಿ ಇಂದು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮ್ಮಿತ್-2017ರ 8ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.

Comments are closed.