ರಾಷ್ಟ್ರೀಯ

ಭೀಮ್ ಆ್ಯಪ್ ವಹಿವಾಟು ಮಿತಿ 20,000 ಕ್ಕಿಂತ ಹೆಚ್ಚಳ

Pinterest LinkedIn Tumblr


ನವದೆಹಲಿ: ಬಿಡುಗಡೆಯಾದ 10 ದಿನಗಳಲ್ಲಿ ಭೀಮ್ (ಭಾರತ್ ಇಂಟರ್ ಫೇಸ್ ಮನಿ) 10 ಮಿಲಿಯನ್ ಡೌನ್ ಲೋಡ್ ಆಗಿದ್ದು, ಶೀಘ್ರವೇ ಭೀಮ್ ಆ್ಯಪ್ ಮೂಲಕ ನಡೆಸುವ ವಹಿವಾಟು ಮಿತಿಯನ್ನು 20,000 ಕ್ಕಿಂತ ಹೆಚ್ಚು ಏರಿಕೆ ಯಾಗುವ ಸಾಧ್ಯತೆ ಇದೆ.
ಭೀಮ್ ಆ್ಯಪ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಳಕೆ ಮಾಡುವವರ ಸಂಖ್ಯೆ ನಿರೀಕ್ಷೆಗೂ ಮೀರಿದಷ್ಟು ಏರಿಕೆಯಾಗಿದ್ದು, ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೊರೇಷನ್(ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಎನ್ ಪಿಸಿಐ) ವಹಿವಾಟುಗಳಿಗೆ ವಿಧಿಸಿದ್ದ ಮಿತಿಯನ್ನು ಸಡಿಲಗೊಳಿಸುವ ಆಯ್ಕೆಯನ್ನು ಪರಿಗಣಿಸಲಿದೆ ( ಪ್ರಸ್ತುತ ದಿನವೊಂದಕ್ಕೆ 20000 ರೂ ಹಾಗೂ ಒಂದು ಬಾರಿಗೆ ಗರಿಷ್ಠ 10 ಸಾವಿರ ರೂ ವಹಿವಾಟು ಮಿತಿ ಇದೆ)
35 ಬ್ಯಾಂಕ್ ಗಳು ಭೀಮ್ ಆ್ಯಪ್ ಅಡಿಯಲ್ಲಿ ವಹಿವಾಟು ನಡೆಸಲು ಪೂರಕವಾಗಿ ನೋಂದಣಿ ಮಾಡಿಕೊಂಡಿದ್ದು, ಆ ಬ್ಯಾಂಕ್ ಗಳ ಬಳಕೆದಾರರು ಸುಲಭವಾಗಿ ಭೀಮ್ ಆ್ಯಪ್ ನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆ್ಯಪ್ ಗೆ ಭಾರಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಬ್ಯಾಂಕ್ ಗಳು ಸಹ ಭೀಮ್ ಆ್ಯಪ್ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲಿವೆ. ಇನ್ನು ಬಿಡುಗಡೆಯಾದಾಗ ಭೀಮ್ ಆಪ್ ಕೇವಲ ಎರಡು ಭಾಷೆಗಳನ್ನು (ಹಿಂದಿ, ಇಂಗ್ಲೀಷ್) ಹೊಂದಿತ್ತು. ಆದರೆ ಶೀಘ್ರವೇ ಆ್ಯಪ್ ನಲ್ಲಿ ಭಾರತದ 10 ಭಾಷೆಗಳನ್ನು ಅಳವಡಿಸಲಾಗುತ್ತದೆ.

Comments are closed.