ರಾಷ್ಟ್ರೀಯ

ರಾಜ್ಯ ಸರ್ಕಾರದಿಂದ ನವದಂಪತಿಗೆ ಕಾಂಡೋಮ್‌!

Pinterest LinkedIn Tumblr


ಜನಸಂಖ್ಯೆ ನಿಯಂತ್ರಣಕ್ಕೆ ರಾಜಸ್ಥಾನ ಸರ್ಕಾರ ಒಂದು ವಿಶಿಷ್ಟ ಕ್ರಮ ಕೈಗೊಂಡಿದೆ. ನವ ದಂಪತಿಗಳಿಗೆ ಕಾಂಡೋಮ್‌, ಗರ್ಭನಿರೋಧಕ ಮಾತ್ರೆ ಮತ್ತು ವ್ಯಾನಿಟಿ ಕಿಟ್‌ಗಳನ್ನು 14 ಜಿಲ್ಲೆಗಳಲ್ಲಿ ಶೀಘ್ರದಲ್ಲೇ ವಿತರಿಸಲಿದೆ.

ಎರಡು ಜೊತೆ ಕಾಂಡೋಮ್‌ ಪ್ಯಾಕೆಟ್‌ಗಳು, 28 ಗರ್ಭನಿರೋಧಕ ಮಾತ್ರೆಗಳ ಎರಡು ಸೆಟ್‌, ಗರ್ಭ ಪರೀಕ್ಷೆಯ ಎರಡು ಕಿಟ್‌ಗಳನ್ನು ನವ ದಂಪತಿಗಳಿಗೆ ಸರ್ಕಾರ ನೀಡಲಿದೆ. ಪ್ರತಿ ಮಹಿಳೆಯ ಸರಾಸರಿ ಹೆರಿಗೆ ಪ್ರಮಾಣವನ್ನು 3 ರಿಂದ 2ಕ್ಕೆ ಇಳಿಸುವ ಗುರಿ ಹೊಂದಲಾಗಿದೆ.

ಇದರ ಜತೆಗೆ ವ್ಯಾನಿಟಿ ಕಿಟ್‌ಗಳನ್ನು ನೀಡಲಾತ್ತಿದೆ. ಅದರಲ್ಲಿ ಎರಡು ಜೊತೆ ಟವೆಲ್‌, ಹಣಿಗೆ, ನೈಲ್‌ ಕಟರ್‌, ಟಿಕ್ಕಳಿ ಪ್ಯಾಕೇಟ್‌ ಹೊಂದಿರಲಿದೆ. ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ಕಿಟ್‌ಗಳನ್ನು ವಿತರಿಸಲಿದ್ದಾರೆ ಎಂದು ರಾಜಸ್ಥಾನದ ಮಕ್ಕಳ ಆರೋಗ್ಯ ನಿರ್ದೇಶಕ ಡಾ. ವಿ.ಕೆ ಮಾಥುರ್‌ ಅವರು ಹೇಳಿದ್ದಾರೆ.

Comments are closed.