ರಾಷ್ಟ್ರೀಯ

ಒಂಟಿ ಮಹಿಳೆಯರಿಗೆ ತಿಂಗಳಿಗೆ 1000 ರು. ವೇತನ

Pinterest LinkedIn Tumblr


ಹೈದರಾಬಾದ್: ಕಷ್ಟದಲ್ಲಿರುವ ಒಂಟಿ ಮಹಿಳೆಯರಿಗೆ ಜೀವನ ಅಗತ್ಯಕ್ಕಾಗಿ ತಿಂಗಳಿಗೆ 1 ಸಾವಿರ ರುಪಾಯಿ ವೇತನ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಇಂದು ವಿಧಾಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ ಚಂದ್ರಶೇಖರ್ ರಾವ್ ಅವರು, ಪ್ರಾಥಮಿಕ ಅಂದಾಜು ಪ್ರಕಾರ, ರಾಜ್ಯದಲ್ಲಿ ಸುಮಾರು 2ರಿಂದ 3 ಲಕ್ಷ ಒಂಟಿ ಮಹಿಳೆಯರು ಸಂಕಷ್ಟದಲ್ಲಿದ್ದು, ಅವರ ಜೀವನ ಭದ್ರತೆಗಾಗಿ ತಿಂಗಳಿಗೆ ಒಂದು ಸಾವಿರ ರುಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಈ ಸಂಬಂಧ ಸರ್ಕಾರ ತಕ್ಷಣವೇ ಆದೇಶ ಹೊರಡಿಸಲಿದ್ದು, ಇದಕ್ಕಾಗಿ ಮಾರ್ಚ್ 2017ರಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ನೀಡಲಾಗುವುದು ಎಂದು ಸಿಎಂ ವಿಧಾನಸಭೆಗೆ ತಿಳಿಸಿದರು.
ಈ ಯೋಜನೆ ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರಲಿದ್ದು, ಸಂಕಷ್ಟದಲ್ಲಿರುವ ಒಂಟಿ ಮಹಿಳೆಯರನ್ನು ಗುರುತಿಸುವ ಜವಾಬ್ದಾರಿ ಆಯಾ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗುವುದು ಎಂದು ರಾವ್ ಹೇಳಿದ್ದಾರೆ.

Comments are closed.