ರಾಷ್ಟ್ರೀಯ

ಸಹಾರಾ ಡೈರಿ: ತನಿಖೆ ಎದುರಿಸಲು ಪ್ರಧಾನಿಗೆ ಭಯವೇಕೆ?: ರಾಹುಲ್

Pinterest LinkedIn Tumblr


ನವದೆಹಲಿ (ಜ.05): ಸಹಾರಾ ಇಂಡಿಯಾ ಕಂಪನಿಗೆ ಕಾನೂನು ಕ್ರಮ ಎದುರಿಸುವುದರಿಂದ ವಿನಾಯಿತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರು ತನಿಖೆಯನ್ನೆದುರಿಸಲು ಏಕೆ ತಯಾರಿಲ್ಲವೆಂದು ಪ್ರಶ್ನಿಸಿದ್ದಾರೆ.
ಕಾನೂನು ಕ್ರಮ ಎದುರಿಸುವುದರಿಂದ ವಿನಾಯಿತಿ ನೀಡಲಾಗಿರುವುದು ಸಹಾರಾ ಕಂಪನಿಗೋ, ಪ್ರಧಾನಿ ಮೋದಿಗೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ತನಿಖೆಯನ್ನೆದುರಿಸಲು ಏಕೆ ಭಯಪಡುತ್ತಿದ್ದಾರೆ ಎಂದು ಕೇಳಿದ್ದಾರೆ.
2014ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಸಹಾರಾ ಕಂಪನಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ ಡೈರಿಯಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ ಸೇರಿದಂತೆ ಇತರ ಪ್ರಭಾವಿ ರಾಜಕಾರಣಿಗಳಿಗೆ ಹಣ ಪಾವತಿಸಲಾದ ವಿವರಗಳಿತ್ತು. ಆ ಘಟನೆ ಬಳಿಕ ಬಳಿಕ ಸಹಾರಾ ಕಂಪನಿಗೆ ಕಾನೂನು ಕ್ರಮ ಎದುರಿಸುವುದರಿಂದ ಹಾಗೂ ದಂಡ ವಿಧಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆ ದು ಆಂಗ್ಲ ದೈನಿಕ ಗುರುವಾರ ವರದಿ ಮಾಡಿತ್ತು.
ದಾಳಿಯ ಸಂದರ್ಭದಲ್ಲಿ ಸಿಕ್ಕಿದ ಬಿಡಿ ಹಾಳೆಗಳನ್ನು ಸಾಕ್ಷ್ಯಾಧಾರವಾಗಿ ಪರಿಗಣಿಸಲಾಗದು ಎಂಬ ಸಹಾರಾ ವಾದಕ್ಕೆ ಮಾನ್ಯತೆ ನೀಡಿದ್ದ ಆದಾಯ ತೆರಿಗೆ ಇತ್ಯರ್ಥ ಆಯೋಗವು (ಐಟಿಎಸ್’ಸಿ), ಜಪ್ತಿ ಮಾಡಲಾದ ರೂ.137.58 ಕೋಟಿಗೆ 12 ಕಂತುಗಳಲ್ಲಿ ತೆರಿಗೆ ಕಟ್ಟಿದರೆ ಸಾಕು ಎಂದು ಆದೇಶಿಸಿತ್ತು.

Comments are closed.