ರಾಷ್ಟ್ರೀಯ

ಅತ್ಯಾಚಾರಕ್ಕೆ ಯತ್ನಿಸಿದ ತಂದೆಯನ್ನೇ ಕೊಂದ ಬಾಲಕಿ!

Pinterest LinkedIn Tumblr

rape1

ಬರೇಲಿ: ತನ್ನ ಮೇಲೆ ಅತ್ಯಾಚಾರಕ್ಕೆ ಮುಂದಾದ ದೂರ್ತ ತಂದೆಯನ್ನು ಬಾಲಕಿಯೇ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿ 45 ವರ್ಷದ ಸೋಂಪಾಲ್ ಎಂಬಾತ ತನ್ನ 14 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ತಂದೆಯ ಕೌರ್ಯದಿಂದ ಆಘಾತಗೊಂಡ ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಪಕ್ಕದ್ದಲ್ಲಿಯೇ ಇದ್ದ ಕೋಲನ್ನು ತೆಗೆದುಕೊಂಡು ದೂರ್ತ ತಂದೆಗೆ ಮನಸೋ ಇಚ್ಛೆ ಬಾರಿಸಿದ್ದಾಳೆ. ಬಾಲಕಿ ಕೊಟ್ಟ ಏಟಿನಿಂದ ಗಂಭೀರವಾಗಿ ಗಾಯಗೊಂಡ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಳಿಕ ಸಾವರಿಸಿಕೊಂಡ ಬಾಲಕಿ ತನ್ನ ತಾಯಿಗೆ ನಡೆದ ವಿಚಾರ ತಿಳಿಸಿದ್ದಾಳೆ. ಕ್ರಮೇಣ ಈ ವಿಚಾರ ಅಕ್ಕಪಕ್ಕದವರಿಗೂ ತಿಳಿದಿದ್ದು, ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮೃತ ತಂದೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಸ್ಥಳೀಯ ಎಸ್ ಪಿ ಸಮೀರ್ ಸೌರಭ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Comments are closed.