
ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಶಶಿಕಲಾ ಅಧಿಕಾರ ವಹಿಸಿದರು.
ಅಭಿಮಾನದಿಂದ ‘ಚಿನ್ನಮ್ಮ’ ಎಂದು ಕರೆಯುವ ಶಶಿಕಲಾ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ಶನಿವಾರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಪಕ್ಷದ ಸಂಸ್ಥಾಪಕರಾದ ಎಂಜಿಆರ್ ಅವರ ಪ್ರತಿಮೆ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಶಶಿಕಲಾ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
‘ಅಮ್ಮ’ ಸದಾ ನನ್ನ ಮನಸ್ಸಿನಲ್ಲಿರುತ್ತಾರೆ, ಅವರೊಂದಿಗೆ 33 ವರ್ಷಗಳ ಕಾಲ ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಎಐಎಡಿಎಂಕೆ ಇನ್ನೂ ಬಹಳ ಕಾಲ ಆಡಳಿತ ನಡೆಸಲಿದೆ ಎಂದರು.
ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ, ಪಕ್ಷದ ನಾಯಕರಾದ ಮದುಸುದನನ್, ಥಂಬಿದೊರೈ ಸೇರಿದಂತೆ ಅನೇಕರು ಶಶಿಕಲಾ ಅವರನ್ನು ಪಕ್ಷದ ಕಚೇರಿಯಲ್ಲಿ ಸ್ವಾಗತಿಸಿದರು.
Comments are closed.