ರಾಷ್ಟ್ರೀಯ

ನೋಟು ನಿಷೇಧ, ನಿತ್ಯವೂ ತಲೆ ಸಿಡಿತ: ಚಂದ್ರಬಾಬು

Pinterest LinkedIn Tumblr

ChandraBabu-Naidu_Andhra_CM
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು 500 ಮತ್ತು 1000 ರೂಪಾಯಿ ನೋಟು ನಿಷೇಧಿದ ಕ್ರಮಕ್ಕಾಗಿ ಮೊದಲ ದಿನದಿಂದಲೇ ಬೆಂಬಲಿಸುತ್ತಾ ಬಂದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈಗ ‘ನೋಟು ನಿಷೇಧ ತಂದ ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ನಿತ್ಯವೂ ತಲೆ ಸಿಡಿಯುತ್ತಿದೆ’ ಎಂದು ಚಿಂತಿಸುತ್ತಿದ್ದಾರೆ.

‘ನೋಟು ನಿಷೇಧ ನಮ್ಮ ಆಶಯವಾಗಿರಲಿಲ್ಲ. ಅದು ಘಟಿಸಿತು. ಸಮಸ್ಯೆಗಳ ಪರಿಹಾರಕ್ಕೆ ಕಳೆದ 40ಕ್ಕೂ ಹೆಚ್ಚು ದಿನಗಳಿಂದ ಗರಿಷ್ಠ ಪ್ರಯತ್ನಗಳನ್ನು ಮಾಡಿದ್ದರೂ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಇದು ದಿನನಿತ್ಯದ ತಲೆನೋವಾಗಿ ಪರಿಣಮಿಸಿದೆ’ ಎಂದು ವಿಜಯವಾಡದಲ್ಲಿ ಸಮಾರಂಭ ಒಂದರಲ್ಲಿ ತೆಲುಗುದೇಶಂ ಪಕ್ಷದ ಶಾಸಕರು ಮತ್ತು ಸಂಸತ್ ಸದಸ್ಯರ ಜೊತೆಗೆ ಮಾತನಾಡುತ್ತಾ ನಾಯ್ಡು ನುಡಿದರು.

ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ನೋಟು ನಿಷೇಧವನ್ನು ಪ್ರಕಟಿಸಿದಾಗ ಭ್ರಷ್ಟಾಚಾರವನ್ನು ನಿರ್ಮೂಲನಗೈಯಲು ದೊಡ್ಡ ಮೌಲ್ಯದ ನೋಟು ನಿಷೇಧಿಸಬೇಕು ಎಂದು ತಾವೇ ಪ್ರಧಾನಿಯನ್ನು ಒತ್ತಾಯಿಸುತ್ತಿದ್ದುದಾಗಿ ನಾಯ್ಡು ಹೇಳಿದ್ದರು. ಕ್ಯಾಶ್ ಲೆಸ್ ಆರ್ಥಿಕ ವ್ಯವಸ್ಥೆ ಜಾರಿ ನಿಟ್ಟಿನಲ್ಲಿ ಮಾರ್ಗ ನಕ್ಷೆ ರೂಪಿಸುವ ಸಲುವಾಗಿ ಇತ್ತೀಚೆಗೆ ರಚಿಸಲಾದ ಮುಖ್ಯಮಂತ್ರಿಗಳ ಸಮಿತಿಗೆ ನಾಯ್ಡು ಅವರನ್ನೇ ನೇಮಕ ಮಾಡಿದಾಗ ‘ಇದು ತೆಲುಗುದೇಶಂನ ನೈತಿಕ ವಿಜಯ’ ಎಂದೂ ಟ್ವೀಟ್ ಮಾಡಿದ್ದರು.

Comments are closed.