ರಾಷ್ಟ್ರೀಯ

150 ವರ್ಷಗಳಲ್ಲೇ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿದ ಇಂಡಿಯಾ!

Pinterest LinkedIn Tumblr

note1ನವದೆಹಲಿ: 150 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ಪ್ರಗತಿ ಸಾಧಿಸಿದೆ.
ಭಾರತದ ಕಳೆದ 25 ವರ್ಷಗಳ ಆರ್ಥಿಕ ಪ್ರಗತಿ ಹಾಗೂ ಬ್ರೆಕ್ಸಿಟ್ ನ ಪರಿಣಾಮದಿಂದ 12 ತಿಂಗಳಲ್ಲಿ ಬ್ರಿಟನ್ ಪೌಂಡ್ ನ ಮೌಲ್ಯ ಕುಸಿದಿದ್ದರ ಪರಿಣಾಮವಾಗಿ 150 ವರ್ಷಗಳಲ್ಲೆ ಮೊದಲ ಬಾರಿಗೆ ಭಾರತ ಬ್ರಿಟನ್ ನ ಆರ್ಥಿಕತೆಯನ್ನು ಸರಿಗಟ್ಟಿದೆ ಎಂದು ಫೋರ್ಬ್ಸ್ ಮ್ಯಾಗಜೀನ್ ಪತ್ರಿಕೆ ವಿಶ್ಲೇಷಿಸಿದೆ.
ಭಾರತ 2020 ರ ವೇಳೆಗೆ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂಬ ನಿರೀಕ್ಷೆ ಇತ್ತು. ಕಳೆದ 12 ತಿಂಗಳಲ್ಲಿ ಪೌಂಡ್ ನ ಮೌಲ್ಯ ಶೇ.20 ರಷ್ಟು ಕುಸಿತ ಕಂಡಿರುವ ಪರಿಣಾಮ ಭಾರತ ತ್ವರಿತವಾಗಿ ಬ್ರಿಟನ್ ನ ಆರ್ಥಿಕತೆಯನ್ನು ಸರಿಗಟ್ಟಲು ಸಾಧ್ಯವಾಗಿದೆ. ಪರಿಣಾಮವಾಗಿ 2016ರ ಬ್ರಿಟನ್ ನ 1.87 ಟ್ರಿಲಿಯನ್ ಮೊತ್ತದ ಜಿಡಿಪಿ ಅಮೆರಿಕಾದ ಡಾಲರ್ ಗೆ ಪರಿವರ್ತಿಸಿದರೆ 2.29 ಟ್ರಿಲಿಯನ್ ಡಾಲರ್ ನಷ್ಟಾಗುತ್ತದೆ. ಆದರೆ ಭಾರತದ 153 ಟ್ರಿಲಿಯನ್ ಜಿಡಿಪಿ ಅಮೆರಿಕಾದ ಡಾಲರ್ ಗೆ ಪರಿವರ್ತಿಸಿದರೆ 2.30 ಟ್ರಿಲಿಯನ್ ಡಾಲರ್ ನಷ್ಟಾಗುತ್ತದೆ ಎಂದು ಫೋರ್ಬ್ಸ್ ವರದಿ ಮಾಡಿದೆ.
2011 ರಲ್ಲಿ ಭಾರತದ ಆರ್ಥಿಕತೆ ಬಗ್ಗೆ ಅಂದಾಜು ನೀಡಿದ್ದ ಅರ್ಥಶಾಸ್ತ್ರ ಮತ್ತು ಉದ್ಯಮ ಸಂಶೋಧನಾ ಕೇಂದ್ರದ ಥಿಂಕ್ ಟ್ಯಾಂಕ್, 2020ರ ವೇಳೆಗೆ ಭಾರತ ಬ್ರಿಟನ್ ನ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಿತ್ತು. ಆದರೆ ಅದಕ್ಕೂ ಮುನ್ನವೇ ಭಾರತ ಬ್ರಿಟನ್ ಆರ್ಥಿಕತೆಯನ್ನು ಸರಿಗಟ್ಟಿದೆ.
ಭಾರತದ ಆರ್ಥಿಕತೆ ವಾರ್ಷಿಕವಾಗಿ ಶೇ.6-8 ರ ವರೆಗೆ ಬೆಳವಣಿಗೆಯಾಗುತ್ತಿದ್ದರೆ ಬ್ರಿಟನ್ ಶೇ.1 ರಿಂದ 2 ರಷ್ಟು ಬೆಳವಣಿಗೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಹಾಗೂ ಭಾರತದ ಆರ್ಥಿಕತೆಯಲ್ಲಿ ಮತ್ತಷ್ಟು ಅಂತರ ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Comments are closed.