ರಾಷ್ಟ್ರೀಯ

ಐಡಿಯಾದಿಂದ 1 ರೂ.ಗೆ ಅನ್’ಲಿಮಿಟೆಡ್ 4ಜಿ ಇಂಟರ್ನೆಟ್

Pinterest LinkedIn Tumblr

idea
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ರಿಲಾಯನ್ಸ್ ಜಿಯೋ ಮಾತುಗಳು ಕೇಳಿ ಬರುತ್ತಿವೆ. ತನ್ನ ಅದ್ಭುತ ಆಫರ್’ನಿಂದ ದೇಶದಲ್ಲೇ ಸಂಚಲನ ಮೂಡಿಸಿದ್ದ ಜಿಯೋ ಇತರ ಟೆಲಿಕಾಂ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಕೆದಾರರು ಜಿಯೋ ಕಡೆ ಒಲವು ತೋರಿಸುವುದನ್ನು ಕಂಡ ಕಂಪೆನಿಗಳು ತಾವೂ ಆಕರ್ಷಕ ಆಫರ್’ಗಳನ್ನು ನೀಡಲಾರಂಭಿಸಿದವು. ಏರ್’ಟೆಲ್, ಏರ್’ಸೆಲ್, BSNL ಈಗಾಗಲೇ ಬಳಕೆದಾರರಿಗಾಗಿ ಆಕರ್ಷಕ ಆಫರ್’ಗಳನ್ನು ಪ್ರಸ್ತುತಪಡಿಸಿವೆ. ಇದೀಗ Idea ಕೂಡಾ ಈ ಸಾಲಿಗೆ ಸೇರಿಕೊಂಡಿದೆ. ಹೊಸ ಆಫರ್ ಒಂದನ್ನು ಗ್ರಾಹಕರಿಗಾಗಿ ತಂದಿದೆ. Idea ದ ಈ ಹೊಸ ‘ಐಡಿಯಾ ಇತ್ತ ಗ್ರಾಹಕರಿಗೆ ಖುಷಿ ಕೊಟ್ಟರೆ ಅತ್ತ ಜಿಯೋಗೆ ಸ್ಪರ್ಧೆಯೊಡ್ಡಿದೆ.
ಏನು ಆ ಆಫರ್?
ತನ್ನ ಹೊಸ ಆಫರ್ ಮೂಲಕ ಐಡಿಯಾ ತನ್ನ ಗ್ರಾಹಕರಿಗೆ ಒಂದು ರೂಪಾಯಿಗೆ ಅನ್’ಲಿಮಿಟೆಡ್ 4ಜಿ ಇಂಟರ್’ನೆಟ್ ನೀಡುತಯ್ತಿದೆ. ಸದ್ಯ ಈ ಆಫರ್ ಕೇವಲ ಒಂದು ಗಂಟೆಗೆ ಸೀಮಿತವಾಗಿದೆ. ಈ ಆಫರ್’ನ ಲಾಭ ಹಳೆಯ ಹಾಗೂ ಹೊಸ ಬಳಕೆದಾರರು ಪಡೆಯಬಹುದಾಗಿದೆ. ಈ ಆಫರ್’ನ್ನು ಬಳಸಿಕೊಳ್ಳಲು ಬಳಕೆದಾರರು 411 ನಂಬರ್’ಗೆ ಕರೆ ಮಾಡಬೇಕು. ಬಳಿಕ ಇಲ್ಲಿ ತಿಳಿಸುವ ಸೂಚನೆಗಳನ್ನು ಅನುಸರತಿಸಬೇಕು. ಆದರೆ ಕರೆ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್’ನಲ್ಲಿ 1 ರೂಪಾಯಿಗೂ ಅಧಿಕ ಬ್ಯಾಲೆನ್ಸ್ ಇರಬೇಕು. ಈ ಆಫರ್ ಆ್ಯಕ್ಟಿವೇಟ್ ಆಗುತ್ತಿದ್ದಂತೆಯೇ ನಿಮ್ಮ ಬ್ಯಾಲೆನ್ಸ್’ನಲ್ಲಿ 1 ರೂಪಾಯಿ ಕಡಿತಗೊಳ್ಳುತ್ತದೆ.
ಆದರೆ ಇದು ನೋಡಿದಷ್ಟು ಸರಳವಾದ ಆಫರ್ ಅಲ್ಲ. ಇದನ್ನು ಆ್ಯಕ್ಟಿವೇಟ್ ಮಾಡುವ ಮುನ್ನ ಕಂಪೆನಿಯ ಬಹುದೊಡ್ಡ ಶರತ್ತನ್ನು ಪಾಲಿಸಬೇಕಾಗುತ್ತದೆ. ಈ ಆಫರ್ ಈಗಿರುವ ಐಡಿಯಾ ಬಳಕೆದಾರರಿಗಷ್ಟೇ ಅನ್ವಯಿಸುತ್ತದೆ. ಇದರೊಂದಿಗೆ ಬಳಕೆದಾರರಲ್ಲಿ 4ಜಿ ಮೊಬೈಲ್ ಹಾಗೂ ಐಡಿಯಾದ 4ಜಿ ಸಿಮ್ ಇರುವುದು ಅಗತ್ಯ. ಅಲ್ಲದೆ ಈ ಒಂದು ಗಂಟೆಯ ಅವಕಾಶ ಕೇವಲ ಒಂದು ಬಾರಿಯಷ್ಟೇ ಬಳಸಲು ಸಾಧ್ಯ.

Comments are closed.