ರಾಷ್ಟ್ರೀಯ

ಹಳಿತಪ್ಪಿದ ಗುವಾಹಟಿ ಕ್ಯಾಪಿಟಲ್ ಎಕ್ಸ್ ಪ್ರೆಸ್; ಇಬ್ಬರು ಸಾವು, 6 ಮಂದಿಗೆ ಗಾಯ

Pinterest LinkedIn Tumblr

train

ಕೋಲ್ಕತ್ತಾ: ಗುವಾಹಟಿಗೆ ತೆರಳುತ್ತಿದ್ದ ರೈಲು ಸಂಖ್ಯೆ 13248 ರಾಜೇಂದ್ರ ನಗರ್ ಗುವಾಹಟಿ ಕ್ಯಾಪಿಟಲ್ ಎಕ್ಸ್ ಪ್ರೆಸ್, ಪಶ್ಚಿಮ ಬಂಗಾಳ-ಅಸ್ಸಾಂ ಗಡಿಯ ಸಮುಕ್ತಲಾ ರಸ್ತೆ ಸಮೀಪ ಹಳಿತಪ್ಪಿದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟು 6 ಮಂದಿ ಗಾಯಗೊಂಡಿದ್ದಾರೆ.

ಈ ಅಪಘಾತ ಪಶ್ಚಿಮ ಬಂಗಾಳದ ಅಲಿಪುರ್ದ್ವರ್ ಜಿಲ್ಲೆಯಲ್ಲಿ ಸಂಭವಿಸಿದೆ. ಸುಮಾರು 150 ಪ್ರಯಾಣಿಕರನ್ನು ಅಲಿಪುರ್ದ್ವರ್ ಸ್ಟೇಷನ್ ಗೆ ಕರೆತರಲಾಗಿದೆ. ಹಾನಿಯಾಗದಿರುವ ರೈಲಿನ ಬೋಗಿಗಳನ್ನು ಕಳಚಿ ಸ್ಥಳದಿಂದ ತೆಗೆಯಲಾಯಿತು. ಹಳಿತಪ್ಪಿರುವ ಬೋಗಿಗಳನ್ನು ತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ಈ ಘಟನೆಯಿಂದಾಗಿ ಇತರ ಆರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

Comments are closed.