ನವದೆಹಲಿ: ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್ ನ 1201 ಕೋಟಿ ರುಪಾಯಿ ಸಾಲವನ್ನು ಉದ್ದೇಶಪೂರ್ವಕವಾಗಿ ಎಸ್ಬಿಐ ಮನ್ನಾ ಮಾಡಿದೆ ಎಂಬ ಮಾಧ್ಯಮ ವರದಿಯನ್ನು ಎಸ್ಬಿಐ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ ನಿರಾಕಿಸಿದ್ದಾರೆ.
ಮಲ್ಯ ಸಾಲ ಮನ್ನಾ ಸುದ್ದಿ ಮಾಧ್ಯಮಗಳ ಅಸ್ಪಷ್ಟ ಪ್ರಚಾರ ಎಂದು ಹೇಳಿರುವ ಅವರು ನಮ್ಮ ಬ್ಯಾಂಕಿನ ಗೌರವಕ್ಕೆ ಕಳಂಕ ತರಲು ಮಾಧ್ಯಮದವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಾಕಿಯಿರುವ ಸುಸ್ತಿದಾರ ಸಂಗ್ರಹ ಖಾತೆಗೆ ಇವರ ಖಾತೆಯನ್ನು ಸೇರಿಸುವುದರಿಂದ ಲೆಕ್ಕಾಚಾರಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದು, ಮಲ್ಯರಿಂದ ಎಸ್ಬಿಐ ಹಣವನ್ನು ವಸೂಲು ಮಾಡುತ್ತದೆ. ಆದರೆ ಇದಕ್ಕೆ ಸಮಯಾವಕಾಶ ಹಿಡಿಯಬಹುದು ಎಂದು ಅರುಂಧತಿ ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ 1,201 ಕೋಟಿ ರುಪಾಯಿ ಸೇರಿದಂತೆ ಬಾಕಿ ಉಳಿಸಿಕೊಂಡಿದ್ದ ಒಟ್ಟು 7 ಸಾವಿರ ಕೋಟಿ ರುಪಾಯಿ ಸಾಲವನ್ನು ಅಡ್ವಾನ್ಸ್ ಅಂಡರ್ ಕಲೆಕ್ಷನ್ ಅಕೌಂಟ್ಸ್(ಎಯುಸಿಎ) ವರ್ಗಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿತ್ತು.
ರಾಷ್ಟ್ರೀಯ
Comments are closed.