ರಾಷ್ಟ್ರೀಯ

ಸುಷ್ಮಾ ಸ್ವರಾಜ್‌ಗೆ ಮೂತ್ರಪಿಂಡ ವೈಫಲ್ಯ; ಆಸ್ಪತ್ರೆಗೆ ದಾಖಲು

Pinterest LinkedIn Tumblr

Sushma-Swaraj2

ನವದೆಹಲಿ: ಮೂತ್ರಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಾಗಿದ್ದು, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದಾರೆ.

ಕಳೆದ ನ ೭ರಂದು ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಷ್ಮಾ ಅವರಿಗೆ ಎರಡು ದಶಕಗಳಿಂದ ಡಯಾಬೆಟಿಸ್ ತೊಂದರೆ ಇದೆ ಆದುದರಿಂದ ಅವರ ಕಿಡ್ನಿಗೆ ತೊಂದರೆಯಾಗಿದೆ. ಅವರು ಈಗ ಡಯಾಲಿಸಿಸ್ ಗೆ ಒಳಗಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ” ಎಂದು ಎಐಐಎಂಎಸ್ ವೈದ್ಯರು ಹೇಳಿದ್ದಾರೆ.

ವೈದ್ಯರು ತಿಳಿಸಿರುವ ಪ್ರಕಾರ ಸುಷ್ಮಾ ಸ್ವರಾಜ್ ಅವರ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು ತೀವ್ರ ಡಯಾಬೆಟಿಕ್ ತೊಂದರೆಯಿಂದ ನರಳುತ್ತಿದ್ದಾರೆ. ಈ ಹಿಂದೆ ಶ್ವಾಸಕೋಶದ ತೊಂದರೆಯಿಂದ ೬೪ ವರ್ಷದ ಸುಷ್ಮಾ ಸ್ವರಾಜ್ ಅವರನ್ನು ಏಪ್ರಿಲ್ ನಲ್ಲಿ ಹಲವು ವಾರಗಳ ಕಾಲ ಎಐಐಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು ನಾನು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು, ಏಮ್ಸ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಸದ್ಯಕ್ಕೆ ಡಯಾಲಿಸೀಸ್‌ಗೊಳ್ಳಗಾಗಿರುವ ನಾನು ಕಿಡ್ನಿ ಚಿಕಿತ್ಸೆಗೂ ಒಳಗಾಗಬೇಕಿದೆ, ಭಗವನ್ ಶ್ರೀ ಕೃಷ್ಣಾ ಪರಮಾತ್ಮ ಕಾಪಾಡಲಿದ್ದಾನೆ ಎಂದು ಬರೆದುಕೊಂಡಿದ್ದಾರೆ.

Comments are closed.