ರಾಷ್ಟ್ರೀಯ

ಎರಡು ಮೂಟೆ ಹರಿದ ನೋಟು ಪತ್ತೆ

Pinterest LinkedIn Tumblr

torn-notes-finalಕೊಲ್ಕತ್ತಾ: ಇಲ್ಲಿನ ವಾಣಿಜ್ಯ ಪ್ರದೇಶದಲ್ಲಿ ಎರಡು ಮೂಟೆಗಳಷ್ಟು ₹500, ₹1000 ಮುಖಬೆಲೆಯ ಹರಿದ ನೋಟುಗಳು ಪತ್ತೆಯಾಗಿವೆ.

ಸ್ಥಳೀಯರಿಂದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

‘ಎರಡು ಮೂಟೆಗಳಲ್ಲಿ ಹರಿದ ಸ್ಥಿತಿಯಲ್ಲಿದ್ದ ಹಣವನ್ನು ಗಾಲ್ಫ್‌ ಕ್ಲಬ್‌ ರಸ್ತೆಯಲ್ಲಿರುವ ಕಸದ ಬುಟ್ಟಿಯಲ್ಲಿ ಬಿಸಾಡಲಾಗಿತ್ತು. ಈಗಷ್ಟೆ ತನಿಖೆ ಆರಂಭಿಸಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿ ನಿನ್ನೆ ಗಂಗಾ ನದಿಯಲ್ಲಿಯೂ ಹರಿದ ನೋಟುಗಳು ತೇಲಿಬಂದಿದ್ದವು. ಆ ಪ್ರಕರಣದ ಮರುದಿನವೇ ಈ ಘಟನೆ ನಡೆದಿರುವುದು ಬಾರೀ ಚರ್ಚೆ ಮತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.

Comments are closed.