ರಾಷ್ಟ್ರೀಯ

ನಾಲ್ಕು ಪಾಕ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

Pinterest LinkedIn Tumblr

pakನವದೆಹಲಿ, ಅ. ೩೦ – ಪಾಕಿಸ್ತಾನ ಭಾರತೀಯ ಯೋಧನೊಬ್ಬನನ್ನು ಕೊಂದು ಅವನ ಮೃತದೇಹವನ್ನು ಕತ್ತರಿಸಿ ವಿಕೃತಿ ಮೆರೆದ ಮಾರನೆಯ ದಿನವೇ ರೊಚ್ಚಿಗೆದ್ದ ಭಾರತೀಯ ಸೇನೆ ಗಡಿ ಹತೋಟಿ ರೇಖೆ ಬಳಿಯ ಪಾಕಿಸ್ತಾನದ 4 ಸೇನಾ ನೆಲೆಗಳನ್ನು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಬಳಸಿ ನಾಶ ಮಾಡಿದ್ದು, ಈ ಸಂದರ್ಭದಲ್ಲಿ ಪಾಕ್ ಸೈನಿಕರು ಭಾರಿ ಸಂಖ್ಯೆಯಲ್ಲಿ ಸತ್ತಿದ್ದಾರೆ ಹಾಗೂ ಗಾಯಗೊಂಡಿದ್ದಾರೆನ್ನಲಾಗಿದೆ.

`ಕೇರನ್ ವಿಭಾಗ ಒಂದರಲ್ಲೇ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ದಾಳಿ ನಡೆಸಿ ಪಾಕಿಸ್ತಾನದ 4 ಸೇನಾ ಶಿಬಿರಗಳನ್ನು ಶನಿವಾರ ನಾಶಪಡಿಸಲಾಗಿದೆ’ ಎಂದು ಸೇನೆ ಹೇಳಿದೆ.

ಈ ಸಂದರ್ಭದಲ್ಲಿ ಶತ್ರುಪಾಳೆಯದಲ್ಲಿ ಭಾರಿ ಸಂಖ್ಯೆಯ ಸಾವು ನೋವು ಸಂಭವಿಸಿದೆ ಎಂದು ಉಧಾಮ್ ಪುರದ ಉತ್ತರ ಕಮಾಂಡ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಹಲವಾರು ಪಾಕಿಸ್ತಾನಿ ಸೇನಾ ಶಿಬಿರಗಳ ಮೇಲೆ ಭಾರತೀಯ ಸೇನೆ ಮಾರ್ಟರ್‌ಗಳು, ಭಾರಿ ಹಾಗೂ ಹಗುರ ಮೆಷೀನ್ ಗನ್‌ಗಳನ್ನು ಬಳಸಿ ನಿನ್ನೆಯಿಂದ ಒಂದೇ ಸಮನೆ ದಾಳಿ ನಡೆಸಿ ಪಾಕ್ ಶಿಬಿರಗಳು ಮತ್ತು ಬಂಕರ್‌ಗಳನ್ನು ನಿಖರವಾಗಿ ಗುರಿಯಿಟ್ಟು ಹೊಡೆದು ನಾಶಪಡಿಸಿದೆ. ಆದರೆ, ಅಲ್ಲಿ ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆಯನ್ನು ನಿಖರವಾಗಿ ತಿಳಿಸಲಾಗದು ಎಂದೂ ಸೇನೆ ಹೇಳಿದೆ.

ಸಿಖ್ ರೆಜಿಮೆಂಟ್‌ನ ಯೋಧ ಮನ್‌ಜೀತ್‌ಸಿಂಗ್‌ರನ್ನು ಕೊಂದು ಅವರ ತಲೆ ಕತ್ತರಿಸಿದ್ದು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಸೇನೆ ಹೇಳಿದೆ. ಭಯೋತ್ಪಾದಕರು ಭಾರತದ ಒಳಕ್ಕೆ ನುಸುಳಲು ಪಾಕ್ ಸೇನೆ ಗುಂಡು ಹಾರಿಸುತ್ತ ಅವರಿಗೆ ರಕ್ಷಣೆ ನೀ‌ಡುವ ಸಂದರ್ಭದಲ್ಲಿ ಮನ್‌ಜೀತ್‌ ಸಿಂಗ್ ಗುಂಡಿಗೆ ಬಲಿಯಾಗಿದ್ದರು.

ಹತೋಟಿ ರೇಖೆಯುದ್ದಕ್ಕೂ ಇರುವ ಬೆಟಾಲಿಯನ್ ಕಮಾಂಡರ್‌ಗಳಿಗೆ `ಪಾಕಿಸ್ತಾನ ಗುಂಡು ಹಾರಿಸಿ ಕದನ ವಿರಾಮ ಉಲ್ಲಂಘಿಸಿದಲ್ಲಿ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಿ ಅವರಿಗೆ ತಕ್ಕ ಉತ್ತರ ನೀಡುವಂತೆ ಸೇನೆಯ ಉನ್ನತಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ತಲೆ ಕತ್ತರಿಸಲಾಗಿದ್ದ ಮನ್‌ಜೀತ್ ಸಿಂಗ್ ಅವರ ಮೃತದೇಹವನ್ನು ಶ್ರೀನಗರದಿಂದ ಹರಿಯಾಣದ ಅವರ ಹುಟ್ಟೂರಾದ ಕುರುಕ್ಷೇತ್ರಕ್ಕೆ ತರಲಾಗಿದೆ.

ಗಡಿಯಲ್ಲಿ ಸ್ಫೋಟಕ ಸ್ಥಿತಿ

ಗಡಿ ಹತೋಟಿ ರೇಖೆಯ ಮಚ್ಚಿಲ್, ಕೇರನ್, ಆರ್‌ಎಸ್‌ಪುರ ಮತ್ತು ಕತುವಾ ವಿಭಾಗಗಳಲ್ಲಿ ಪಾಕಿಸ್ತಾನ ಒಂದೇ ಸಮನೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಭಾರತೀಯ ಸೇನೆ ಪ್ರತಿಯಾಗಿ ಭಾರಿ ಪ್ರಮಾಣದಲ್ಲಿ ಹೊಡೆತ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ಫೋಟಕ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕೃತ ಮೂಲಗಳ ಪ್ರರಕಾರ 156ನೇ ಬೆಟಾಲಿಯನ್‌ನ ಯೋಧ ನಿತಿನ್ ಕೋಲಿ ಎಂಬುವರು ಪಾಳ್‌ನ ಶೆಲ್ ದಾಳಿಯಲ್ಲಿ ಗಾಯಗೊಂಡಿದ್ದು, ನಂತರ ಚಿಕಿತ್ಸೆಗೆ ಸ್ಪಂದಿಸದೆ ಸತ್ತಿದ್ದಾನೆ.

ನಿತಿನ್ ಕೋಲಿ ಮತ್ತು ಮನ್‌ಜಿತ್ ಸಿಂಗ್ ಅವರ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಸೇನೆ ರೊಚ್ಚಿಗೆದ್ದು ಪಾಕ್ ಸೇನೆಯೊಂದಿಗೆ ಕಾಳಗಕ್ಕೆ ಇಳಿದಿದೆ.

Comments are closed.