ರಾಷ್ಟ್ರೀಯ

ಮೋದಿ, ಅಮರ್, ಮುಲಾಯಂ, ಅಖಿಲೇಶ್ ಯಾದವ್ ಹೀಗೆ ಹಲವರ ಹೆಸರಿನ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ

Pinterest LinkedIn Tumblr

crackers

ಲಕ್ನೋ: ನರೇಂದ್ರ ಮೋದಿ, ಅಮರ್ ಸಿಂಗ್, ಮುಲಾಯಂ ಸಿಂಗ್, ಅಖಿಲೇಶ್ ಯಾದವ್ ಹೀಗೆ ಹಲವರ ಹೆಸರಿನಲ್ಲಿ ಪಟಾಕಿಗಳು ದೆಹಲಿ, ಉತ್ತರ ಪ್ರದೇಶ ಮಾರುಕಟ್ಟೆಗೆ ಬಂದಿವೆ. ಕೆಲವು ಖ್ಯಾತ ಕ್ರೀಡಾಪಟುಗಳ ಹೆಸರಿನ ಪಟಾಕಿಗಳು ಕೂಡ ಸೇರಿಕೊಂಡು ಬೆಳಕಿನ ಹಬ್ಬ ದೀಪಾವಳಿಗೆ ಇನ್ನಷ್ಟು ಬಣ್ಣಗಳನ್ನು ತುಂಬಿವೆ.

ಕುತೂಹಲಕಾರಿ ವಿಷಯವೆಂದರೆ ಪಟಾಕಿ ತಯಾರಕರು ಬಹುಶಃ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷವನ್ನು ಎತ್ತಿಕೊಂಡು ಸಂದರ್ಭಕ್ಕೆ ತಕ್ಕ ಪಟಾಕಿ ತಯಾರಿಸಿರಬೇಕು. ಈ ದೀಪಾವಳಿಗೆ ಅಮರ್ ಸಿಂಗ್ ಫೂಲ್ಜಾರಿ ಮತ್ತು ರಾಮ್ ಗೋಪಾಲ್ ಮಿರ್ಚಿ ಪಟಾಕಿಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.ಪಟಾಕಿ ಪೊಟ್ಟಣದ ಮೇಲಿನ ಲೇಬಲ್ ಗಳು ನೋಡುಗರ ಕುತೂಹಲ ಕೆರಳಿಸುತ್ತಿವೆ. ಇಡೀ ಯಾದವ ಕುಟುಂಬದವರ ಭಾವಚಿತ್ರಗಳು ಪಟಾಕಿ ಬಾಕ್ಸ್ ನಲ್ಲಿದೆ.

ಇನ್ನೊಂದು ಸಮಾಜವಾದಿ ಟಾಗ್ ವಾರ್ ಪಟಾಕಿಯಿದ್ದು ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿದೆ. ಅದರ ಒಂದು ಕಡೆಯಲ್ಲಿ ಶಿವಪಾಲ್ ಮತ್ತು ಮುಲಾಯಂ ಸಿಂಗ್ ಯಾದವ್ ಇನ್ನೊಂದೆಡೆಯಲ್ಲಿ ಅಖಿಲೇಶ್ ಮತ್ತು ರಾಮ್ ಗೋಪಾಲ್ ಇದ್ದಾರೆ.

ಕೇಂದ್ರ ಸರ್ಕಾರದ ಸರ್ಜಿಕಲ್ ಸ್ಟ್ರೈಕ್, ಸಮಾಜವಾದಿ ಪಕ್ಷದ ಜಗಳವನ್ನು ಇಟ್ಟುಕೊಂಡು ಜನರನ್ನು ಕುತೂಹಲ ಕೆರಳಿಸಲು ಪಟಾಕಿಗಳನ್ನು ತಯಾರಿಸಲಾಗಿದೆ. ದೆಹಲಿಯತ್ತ ಹೋದರೆ ಅಲ್ಲಿ ಮಾರುಕಟ್ಟೆಯಲ್ಲಿ ಮೋದಿ ಬಾಂಬ್, ಸರ್ಜಿಕಲ್ ಸ್ಟ್ರೈಕ್ ರಾಕೆಟ್ ಗಳು ಸಿಗುತ್ತವೆ. ಅವಕ್ಕೆ ಭಾರೀ ಡಿಮ್ಯಾಂಡ್ ಇದೆ ಎನ್ನುತ್ತಾರೆ ಖಾದಿರ್ ಬಾಯ್ ಎಂಬ ವ್ಯಾಪಾರಿ.

ಈ ಮಧ್ಯೆ ಈ ವರ್ಷದ ದೀಪಾವಳಿಗೆ ಚೀನಾ ಪಟಾಕಿಗಳಿಗೆ ಬೇಡಿಕೆ ತುಂಬಾ ಕಡಿಮೆಯಾಗಿದೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.

Comments are closed.