ರಾಷ್ಟ್ರೀಯ

ಭಾರತದಲ್ಲಿ ವಿಜಯ್ ಮಲ್ಯರ ಆಸ್ತಿ ಎಷ್ಟಿದೆ ಗೊತ್ತಾ..ಇಲ್ಲಿದೆ ವಿವರ….

Pinterest LinkedIn Tumblr

Vijay-Mallya---

ನವದೆಹಲಿ: ಸುಪ್ರೀಂ ಕೋರ್ಟ್ ತೀವ್ರ ಒತ್ತಡದ ಮೇರೆಗೆ ಕೊನೆಗೂ ಮದ್ಯದ ದೊರೆ ವಿಜಯ್ ಮಲ್ಯ ಭಾರತದಲ್ಲಿರುವ ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.

ವಿವಿಧ ಬ್ಯಾಂಕುಗಳಲ್ಲಿ ಮಲ್ಯ ಪಡೆದಿರುವ ಸಾಲದ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳ ಒಕ್ಕೂಟ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನಾಲ್ಕು ದಿನಗಳಲ್ಲಿ ಭಾರತ ಆಸ್ತಿ ಘೋಷಣೆ ಮಾಡುವಂತೆ ಮಲ್ಯಗೆ ಸೂಚಿಸಿತ್ತು. ಅದರಂತೆ ನಿನ್ನೆ ಆಸ್ತಿ ಘೋಷಣೆ ಇರುವ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಪ್ರಸ್ತುತ ತಮ್ಮ ಬಳಿ 16,440 ರು. ನಗದು ಹಣವಿದ್ದು, ವಿವಿಧ ಬ್ಯಾಂಕಗಳಲ್ಲಿನ ಖಾತೆಗಳಲ್ಲಿ 12.6 ಕೋಟಿ ರು.ಹಣವಿದೆ. ಅಂತೆಯೇ ವಿದೇಶಗಳಲ್ಲಿ 5.2 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಆದರೆ ಮಲ್ಯ ತಮ್ಮ ಈ ಹೇಳಿಕೆಯಲ್ಲಿ ವಿದೇಶಿ ಬ್ಯಾಂಕ್ ಖಾತೆಯಲ್ಲಿರುವ ಹಣದ ವಿಚಾರವನ್ನು ಮಾತ್ರ ಬಹಿರಂಗ ಪಡಿಸಿಲ್ಲ.

ನ್ಯಾಯಾಲದ ಆದೇಶವನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಮಲ್ಯ ವಿರುದ್ಧ ನಿಂಧನೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಭಾರತದಲ್ಲಿರುವ ಆಸ್ತಿ ವಿವರ ಬಹಿರಂಗ ಪಡಿಸುವಂತೆ ಆದೇಶ ನೀಡಿತ್ತು. ಈ ಪೈಕಿ ಯುನೈಟೆಡ್ ಸ್ಪಿರಿಟ್ಸ್ ನ ಮಾಲೀಕತ್ವ ವಿರುವ ಡಿಯಾಜಿಯೋ ಸಂಸ್ಥೆಯಿಂದ ಪಡೆದ 40 ಮಿಲಿಯನ್ ಡಾಲರ್ ಮೊತ್ತದ ವಿವರವನ್ನು ಕೂಡ ನೀಡುವಂತೆ ನ್ಯಾಯಾಲಯ ಕೇಳಿತ್ತು.

ಈ ಹಿಂದೆ ಡಿಯಾಜಿಯೋ ಸಂಸ್ಥೆಯ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ, ಆ ಸ್ಥಾನದಿಂದ ಕೆಳಗಿಳಿಯಲು 75 ಮಿಲಿಯನ್ ಡಾಲರ್ ಮೊತ್ತ ನೀಡಬೇಕು ಎಂದು ಡಿಯಾಜಿಯೋ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಮಲ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಾಗ ಅಂದರೆ ಕಳೆದ ಫೆಬ್ರವರಿ 25 ರಂದು 40 ಮಿಲಿಯನ್ ಡಾಲರ್ ಹಣವನ್ನು ನೀಡಲಾಗಿತ್ತು. ಉಳಿದ ಹಣವನ್ನು ಮುಂದಿನ ಐದು ವರ್ಷಗಳಲ್ಲಿ ಪಾವತಿ ಮಾಡಲಾಗುತ್ತದೆ ಎಂದು ಡಿಯಾಜಿಯೋ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ಮಲ್ಯ ಡಿಯಾಜಿಯೋ ಸಂಸ್ಥೆಯಿಂದ ಹಣ ಪಡೆದ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿರಲಿಲ್ಲ. ಇದು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿತ್ತು.

Comments are closed.