ರಾಷ್ಟ್ರೀಯ

‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’: ಮೋದಿಯಿಂದ ಪ್ರೇರೇಪಿತರಾದ ಟ್ರಂಪ್

Pinterest LinkedIn Tumblr

trump-newನವದೆಹಲಿ (ಅ.25): ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನೆರೆಡೆ ವಾರಗಳು ಬಾಕಿಯಿದ್ದು ಚುನಾವಣಾ ಪ್ರಚಾರ ಜೋರಾಗಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೋದಿಯವರ ಚುನಾವಣಾ ಘೋಷವನ್ನು ತಮ್ಮ ಪ್ರಚಾರದಲ್ಲಿ ಬಳಸುತ್ತಿದ್ದಾರೆ.
2014 ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಬಳಸಿದ ಘೋಷವಾಕ್ಯ ‘ಅಬ್ ಕಿ ಬಾರ್ ಮೋದಿ ಸರ್ಕಾರ್’ ನ್ನು ಇಟ್ಟುಕೊಂಡು ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದಿದ್ದಾರೆ. ಇದು ಡೊನಾಲ್ಡ್ ಟ್ರಂಪ್ ಭಾರತದ ಮೇಲಿಟ್ಟ ವಿಶ್ವಾಸವನ್ನು ತೋರಿಸುತ್ತದೆ.
ಟ್ರಂಪ್ ಎನ್ ಡಿ ಟಿವಿ ಗೆ ಕೊಟ್ಟ ಸಂಸರ್ಶನದಲ್ಲಿ “ ನಾವು ಭಾರತವನ್ನು, ಹಿಂದೂಗಳನ್ನು ಪ್ರೀತಿಸುತ್ತೇವೆ. ನನಗೆ ಹಿಂದೂಗಳ ಮೇಲೆ ಅಪಾರ ಗೌರವವಿದೆ. ಸಾಕಷ್ಟು ಹಿಂದೂ ಸ್ನೇಹಿತರಿದ್ದಾರೆ. ಅವರು ಗ್ರೇಟ್ ವ್ಯಕ್ತಿಗಳು. ಒಳ್ಳೆಯ ಉದ್ಯಮಿಗಳು ಎಂದು ಹೊಗಳಿದ್ದಾರೆ.

Comments are closed.