ರಾಷ್ಟ್ರೀಯ

ಹುರಿಯತ್ ತೀವ್ರಗಾಮಿ ಸಂಘದ ಅಧ್ಯಕ್ಷ ಸಯ್ಯದ್ ಅಲಿ ಷಾ ಗಿಲಾನಿ ಪುತ್ರ ಬಂಧನ

Pinterest LinkedIn Tumblr

gilanifಶ್ರೀನಗರ: ಸರ್ಕಾರಿ ಆಸ್ಪತ್ರೆಯ ವೈದ್ಯ ಮತ್ತು ಹುರಿಯತ್ ಮುಖಂಡ ಸಯ್ಯದ್ ಅಲಿ ಷಾ ಗಿಲಾನಿ ಅವರ ಹಿರಿಯ ಪುತ್ರನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ತಂದೆಯ ಮನೆಗೆ ಹಿಂದಿರುಗುವಾಗ ಸುಮಾರು ಬೆಳಗ್ಗೆ 10 ಘಂಟೆಗೆ ನಾಯಿಮ್ ಗಿಲಾನಿ ಅವರನ್ನು ಹೈದೆರಾಪೋರಾದಲ್ಲಿ ಬಂಧಿಸಲಾಗಿದೆ ಎಂದು ತಿಳಿಯಲಾಗಿದೆ.
“ಅವರನ್ನು ಮನೆಯ ಒಳಗೆ ಹೋಗಲು ಬಿಡಲಿಲ್ಲ ಮತ್ತು ಪೊಲೀಸರು ಬಂಧಿಸಿದರು” ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ ಹುರಿಯತ್ ತೀವ್ರಗಾಮಿ ಸಂಘದ ಅಧ್ಯಕ್ಷ ಗಿಲಾನಿ ದೇಶವುನ್ನುದ್ದೇಶಿಸಿ ಮಾತನಾಡುತ್ತಾರೆ ಎಂಬ ಸುದ್ದಿ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಗಿಲಾನಿ ಅವರ ಮನೆಯನ್ನು ಹೊಕ್ಕದಂತೆ ಅವರ ಕುಟುಂಬ ಸದಸ್ಯರು, ಮಾಧ್ಯಮ ಮತ್ತು ಬಹುತೇಕ ಎಲ್ಲ ಅತಿಥಿಗಳನ್ನು ಪೊಲೀಸರು ತಡೆದಿದ್ದಾರೆ. “ಮನೆಯಿಂದ ದೂರವಾಣಿ ಕರೆಗಳು ಹೊರಹೋಗದಂತೆ ತಡೆಯಲು ಅಧಿಕಾರಿಗಳು ಜಾಮರ್ ಗಳನ್ನೂ ಅಳವಡಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಜುಲೈ 8 ರಿಂದ ಹಿಜಬುಲ್ ಕಮ್ಯಾಂಡರ್ ಬುರ್ಹಾನ್ ವಾನಿ ಹತ್ಯೆಯಾದಾಗಲಿಂದಲೂ ಕಾಶ್ಮೀರ ಗಲಭೆಯ ಮುಂದಾಳತ್ವ ವಹಿಸಿರುವ ಗಿಲಾನಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಂಶಯ ಬರುವ ಪ್ರತ್ಯೇಕವಾದಿ ಬಣದ ಮುಖಂಡರನ್ನು ರಾಜ್ಯ ಪೊಲೀಸರು ಮತ್ತು ಭಧ್ರತಾ ಪಡೆಗಳಿ ಕೆಲವು ದಿನಗಳಿಂದ ವಶಕ್ಕೆ ಪಡೆಯುತ್ತಿವೆ.

Comments are closed.