ಅಂತರಾಷ್ಟ್ರೀಯ

ಫೇಸ್ ಬುಕ್ ಬಳಕೆಯಲ್ಲಿ ಅಮೆರಿಕಾವನ್ನ ಹಿಂದಿಕ್ಕಿದ ಇಂಡಿಯಾ

Pinterest LinkedIn Tumblr

facebookನವದೆಹಲಿ: ದೆಹಲಿ: ಭಾರತ ದೇಶವೇ ಹಾಗಿದೆ ಕಣ್ರಿ… ಇಲ್ಲಿ ಇನ್ವೆಸ್ಟ್ ಮಾಡಿದ್ರೆ ಯಾರ್ ಬೇಕಾದ್ರೂ ಕೈತುಂಬಾ ಕಾಸು ಮಾಡ್ಬಹುದು. ಇದೀಗ ಇದೇ ಲಿಸ್ಟ್ ಗೆ ಫೇಸ್ಬುಕ್ ಕೂಡಾ ಸೇರ್ಪಡೆಯಾಗಿದೆ.

ಪ್ರಮುಖ ಜಾಲತಾಣವಾದ ಫೇಸ್ಬುಕ್ ನಲ್ಲಿ ಜಗತ್ತಿನ ದೊಡ್ಡಣ್ಣ ಅನಿಸಿಕೊಂಡಿರುವ ಅಮೆರಿಕಾವನ್ನು ಭಾರತ ಹಿಂದಿಕ್ಕಿ ಉತ್ತಮ ಮಾರುಕಟ್ಟೆ ಒದಗಿಸಿಕೊಂಡಿದೆ. ಅಮೆರಿಕಾ ಮಾರುಕಟ್ಟೆಗೆ ಹೋಲಿಸಿದ್ರೆ, ಭಾರತದಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ.22 ರಷ್ಟು ಪ್ರತಿಷಶತದಷ್ಟು ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಈ ಮೂಲಕ ಅಮೇರಿಕಾಕ್ಕಿಂತ ಭಾರತ ಫೇಸ್ಬುಕ್ ಬಳಕೆಯಲ್ಲಿ ನಾಗಾಲೋಟದಿಂದ ಮುನ್ನುಗ್ಗುತ್ತಿದೆ.

ಹೀಗಾಗಿ ಫೇಸ್ಬುಕ್ ಬಳಕೆದಾರರಿಗೆ ಇನ್ನು ಹೆಚ್ಚಿನ ಆಪ್ ಗಳನ್ನು ನೀಡುವ ಉದ್ದೇಶದಿಂದ ಹೊಸ ಹೊಸ ಆವಿಷ್ಕಾರ ಮಾಡುತ್ತಿದೆ. ಅಲ್ಲದೇ ಭಾರತದಲ್ಲಿ147 ಮಿಲಿಯನ್ ಜನ ಫೇಸ್ಬುಕ್ಅನ್ನು ತಮ್ಮ ಮೊಬೈಲ್ ನಲ್ಲಿ ಬಳಸುತ್ತಿದ್ದಾರೆ ಎಂದು ಆ್ಯಡಮ್ ಮೊಸೇರಿ ತಿಳಿಸಿದ್ದಾರೆ.

ಜೊತೆಗೆ ಎಮೀಜಿ ರೀತಿಯ ರಿಯಾಕ್ಷನ್, ಖುಷಿ, ಸ್ಯಾಡ್ನೆಸ್, ಹಾಗೂ ಸರ್ಫ್ರೈಸ್ ಗೆ ಹೆಚ್ಚಾಗಿ ಬಳಸುತ್ತಾರೆ. ಲೈಕ್ಸ್ ಜೊತೆ ಶೇ. 50 ರಷ್ಟು ಜನ ಲವ್ ಸಿಂಬೊಲ್, ಮತ್ತೆ ಮಿಕ್ಕ ಕೆಲ ವರ್ಗದ ಬಳಕೆದಾರರು ಹ್ಹಾ… ಹ್ಹಾ… ಪದ ಬಳಕೆ ಮಾಡುತ್ತಾರೆ. ಇವುಗಳ ಜೊತೆಗೆ ನೂತನ ಸಿಂಬೋಲ್ ನೀಡಲಾಗುವುದು ಎಂದ, ಆ್ಯಡಮ್ ಮೊಸೇರಿ, ಡಿಸ್ಲೈಕ್ ಆಪ್ಶನ್ ನೀಡುವುದಾಗಿ ತಿಳಿಸಿದ್ದಾರೆ.

Comments are closed.