ರಾಷ್ಟ್ರೀಯ

ರಾಮಾಯಣ ಮ್ಯೂಸಿಯಂ ನಿರ್ಮಾಣಕ್ಕೆ ವಿರೋಧ: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯ

Pinterest LinkedIn Tumblr

ramaಆಯೋಧ್ಯೆ (ಅ.19): ರಾಮ ಜನ್ಮ ಭೂಮಿ ಆಯೋಧ್ಯೆ ಬಳಿ ರಾಮಾಯಣ ಕುರಿತ ಮ್ಯೂಸಿಯಂ ನಿರ್ಮಿಸಲು ಮುಂದಾಗಿದ್ದ ಕೇಂದ್ರ ಸರಕಾರಕ್ಕೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ.
ಬಿಜೆಪಿಯಲ್ಲೇ ಮ್ಯೂಸಿಯಂ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ರಾಮ ದೇವಾಲಯವನ್ನೇ ನಿರ್ಮಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.
ಅಲ್ಲದೆ ರಾಮ ಜನ್ಮ ಭೂಮಿ ಎಂದೆ ಖ್ಯಾತಿ ಪಡೆದಿರುವ ಅಯೋಧ್ಯೆಯಲ್ಲಿ ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಕೇಂದ್ರ ಸರಕಾರ 25 ಎಕರೆ ಪ್ರದೇಶದಲ್ಲಿ ಮ್ಯೂಸಿಯಂ ನಿರ್ಮಿಸಲು 225 ಕೋಟಿ ಮಂಜೂರು ಮಾಡಿರುವ ಬೆನ್ನಲ್ಲೆ ಸಮಾಜವಾದಿ ಪಾರ್ಟಿ ರಾಮಲೀಲಾ ಪಾರ್ಕ್ ನಿರ್ಮಿಸುವ ಬಗ್ಗೆ ಅಧಿಕೃತ ಹೇಳಿಕೆ ನೀಡಿತ್ತು.

Comments are closed.