ಗುವಾಹಟಿ (ಅ.19): ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಸುಧೀರ್ಘ 16 ವರ್ಷಗಳ ಕಾಲ ಉಪವಾಸ ನಡೆಸಿದ್ದ ಇರೋಮ್ ಶರ್ಮಿಳಾ ರಾಜಕೀಯ ಪ್ರವೇಶ ಮಾಡಿದ್ದಾರೆ.
ಇಂಫಾಲ್ ನಲ್ಲಿ ತಮ್ಮ ರಾಜಕೀಯ ಪಕ್ಷಕ್ಕೆ ಚಾಲನೆ ನೀಡುವ ಮುಖಾಂತರ ಅಧಿಕೃತವಾಗಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲ್ ನಲ್ಲಿ ಇರೋಮ್ ಶರ್ಮಿಳಾ ತಮ್ಮ ನೂತನ ಪಕ್ಷ ಜನತಾ ಪುನರುಜ್ಜೀವನ ಮತ್ತು ನ್ಯಾಯ ಮೈತ್ರಿಕೂಟಗೆ ಚಾಲನೆ ನೀಡಿದರು.