ರಾಷ್ಟ್ರೀಯ

ಅಣ್ಣಾ ಹಜಾರೆಯನ್ನು ಡೋಂಗಿ ಬಾಬಾ ಎಂದು ಟ್ವೀಟಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಗಾಯಕ ಅಭಿಜಿತ್

Pinterest LinkedIn Tumblr

anna

ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಗಾಯಕ ಅಭಿಜಿತ್ ಭಟ್ಟಾಚಾರ್ಯ ಡೋಂಗಿ ಬಾಬಾ ಎಂದು ಟ್ವೀಟಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಅಣ್ಣಾ ಹಜಾರೆ ಅವರ ಜೀವನಾಧಾರಿತ ಚಿತ್ರ ಅಣ್ಣಾ: ಕಿಷನ್ ಬಾಬುರಾವ್ ಹಜಾರೆ ಚಿತ್ರವನ್ನು ವೀಕ್ಷಿಸಿದ ಬಳಿಕ ಅಭಿಜಿತ್ ಈ ರೀತಿ ಟ್ವೀಟ್ ಮಾಡಿದ್ದು, ಅಭಿಜಿತ್ ಅವರ ಈ ಟ್ವೀಟ್ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಅಭಿಜಿತ್ ಭಟ್ಟಾಚಾರ್ಯ ಟ್ವೀಟ್ ನಲ್ಲಿ ಡೋಂಗಿ ಬಾಬಾ ಅಣ್ಣಾ ಬಿಡುಗಡೆಯಾಗಿದೆ. ಈ ವಾರ ತೆರೆಕಂಡ ಏಕಮೇವ ಚಿತ್ರ ಇದಾಗಿದ್ದು ಈ ಚಿತ್ರವನ್ನು ವೀಕ್ಷಿಸಲು ಅರವಿಂದ್ ಕೇಜ್ರಿವಾಲ್ ಸಹ ಹೋಗಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

Comments are closed.