ರಾಷ್ಟ್ರೀಯ

ಭಾರತದ ಜಾತ್ಯತೀತ -ಬಹುತ್ವ ಸಂಸ್ಕೃತಿಯನ್ನು ‘ಏಕ ನಾಗರಿಕ ಸಂಹಿತೆ’ ನಾಶ ಮಾಡುತ್ತದೆ: ಅಸಾದುದ್ದೀನ್ ಓವೈಸಿ

Pinterest LinkedIn Tumblr

Ovaisi Cake-700ನವದೆಹಲಿ(ಅ.13): ಮೂರು ತಲಾಖ್ ಬದಲಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ‘ಏಕನಾಗರಿಕ ಸಂಹಿತೆ’ ಇದೀಗ ರಾಜಕೀಯ ಬಣ್ಣ ಪಡೆಯುತ್ತಿದೆ.
ತಲಾಖ್ ಬದಲಿಗೆ ಏಕ ನಾಗರಿಕ ಸಂಹಿತೆ ಕಾನೂನನ್ನು ಅನುಷ್ಟಾನಗೊಳಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ತನ್ನ ಅಭಿಪ್ರಾಯ ತಿಳಿಸಿದರೆ, ಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ‘ಭಾರತದ ಜಾತ್ಯತೀತ ಹಾಗೂ ಬಹುತ್ವ ಸಂಸ್ಕೃತಿಯನ್ನು ‘ಏಕ ನಾಗರಿಕ ಸಂಹಿತೆ’ ನಾಶ ಮಾಡುತ್ತದೆ’ ಎಂದು ತಿಳಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಹ ತಲಾಖ್ ಬದಲಿ ಕಾನೂನನ್ನು ವಿರೊಧಿಸಿದ್ದು, ಕೇಂದ್ರವು ಒಂದು ಸರ್ಕಾರವು ಒಂದು ಸಮುದಾಯದ ವಿರುದ್ಧ ಯುದ್ಧ ಘೋಷಿಸುತ್ತಿದೆ ಎಂದು ಪ್ರತಿಕ್ರಿಯಿಸಿದ್ದು, ಒಂದು ಸಮುದಾಯದ ವಿರುದ್ಧ ಬಲವಂತವಾಗಿ ಕಾನೂನು ಹೇರುತ್ತಿದೆ ಎಂದು ತಿಳಿಸಿದೆ.
ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೋಯ್ಲಿ ಕೂಡ ಏಕ ನಾಗರಿಕ ಸಂಹಿತೆಯನ್ನು ವಿರೋಧಿಸಿದ್ದು, ‘ವಿವಿಧ ಸಂಸ್ಕೃತಿಯನ್ನು ಹೊಂದಿರುವ ಈ ದೇಶದಲ್ಲಿ ಒಂದೇ ರೂಪವಾದ ಕಾನೂನು ಜಾರಿಗೊಳಿಸಲು ಸಾಧ್ಯವಿಲ್ಲ. ಅದು ಹಿಂದೂ ವಿಚಾರವಾಗಿರಬಹುದು ಮುಸ್ಲಿಂಮರದ್ದಾಗಿರಬಹುದು. ಭಾರತದಲ್ಲಿ ವಿವಿಧ ಸಮುದಾಯಗಳಲ್ಲಿ 200 ರಿಂದ 300 ಕ್ಕೂ ಹೆಚ್ಚು ವೈಯಕ್ತಿಕ ಕಾನೂನುಗಳಿವೆ’ ಎಂದು ತಿಳಿಸಿದ್ದಾರೆ.
ಇನ್ನೊಂದು ರಾಷ್ಟ್ರೀಯ ಪಕ್ಷವಾದ ಜೆಡಿಯು ಸಹ ಈ ಕಾನೂನನ್ನು ವಿರೊಧಿಸಿದ್ದು, ಮುಂಬರುವ ಅನೇಕ ವಿಧಾನಸಭಾ ಚುನಾವಣೆಗಳ ಪ್ರಯುಕ್ತ ಮತಗಳನ್ನು ಧೃವಿಕರಿಸುದಕ್ಕಾಗಿ ಈ ಕಾನೂನು ಜಾರಿಗೊಳಿಸಲು ಹೊರಟಿದೆ’ ಎಂದು ಆರೋಪಿಸಿದೆ.
‘ಎಲ್ಲ ಪ್ರಮುಖ ಮಧ್ಯಸ್ಥಗಾರರ ಅಭಿಪ್ರಾಯ ಪಡೆದೆ ಸುಪ್ರಿಂ ಕೋರ್ಟ್’ಗೆ ಮನವಿ ಸಲ್ಲಿಸಲಾಗಿದೆ’. ಇದು ದೇಶದ ದೇಶದ ಏಕತೆಯನ್ನು ಒಗ್ಗೂಡಿಸುವ ಪ್ರಗತಿಪರ ಕಾನೂನಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ತಿಳಿಸಿದ್ದಾರೆ.

Comments are closed.