ರಾಷ್ಟ್ರೀಯ

ಕಾಶ್ಮೀರದ ಸರ್ಕಾರಿ ಕಚೇರಿ ಮೇಲೆ ಭಯೋತ್ಪಾದಕರ ದಾಳಿ: ಓರ್ವ ಸೈನಿಕನಿಗೆ ಗಾಯ; ಮುಂದುವರಿದ ಶೋಧ ಕಾರ್ಯ

Pinterest LinkedIn Tumblr

ter

ಶ್ರೀನಗರ: ಮೂವರು ಉಗ್ರಗಾಮಿಗಳ ಗುಂಪೊಂದು ಸೋಮವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಾಂಪೊರ್ ಪಟ್ಟಣದಲ್ಲಿ ಸರ್ಕಾರಿ ಕಟ್ಟಡದ ಮೇಲೆ ದಾಳಿ ನಡೆಸಿದ್ದು ಇದರಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಶ್ರೀನಗರದ ಹೊರವಲಯದಲ್ಲಿ ಉದ್ಯಮ ಅಭಿವೃದ್ಧಿ ಸಂಸ್ಥೆಯ ಒಳಗೆ ಇಂದು ನಸುಕಿನ ಜಾವ 6.30ರ ಸುಮಾರಿಗೆ ನುಗ್ಗಿದ ಭಯೋತ್ಪಾದಕರು ಭದ್ರತಾ ಪಡೆಯವರ ಗಮನ ಸೆಳೆಯಲು ಗುಂಡಿನ ಸುರಿಮಳೆಗೈದರು.ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಯೋಧರು ಕಟ್ಟಡವನ್ನು ಸುತ್ತುವರಿದಿದ್ದು ಶೋಧ ಕಾರ್ಯ ನಡೆಯುತ್ತಿದೆ. ಭಯೋತ್ಪಾದಕರು ಕಟ್ಟಡದೊಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಉಗ್ರಗಾಮಿಗಳು ತಪ್ಪಿಸಿಕೊಂಡು ಹೋಗಬಹುದಾದ ಹಾದಿಗಳನ್ನೆಲ್ಲ ಮುಚ್ಚಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಇದೇ ಕಟ್ಟಡದಲ್ಲಿ 48 ಗಂಟೆಗಳ ಸತತ ಗುಂಡಿನ ಚಕಮಕಿ ನಡೆದಿತ್ತು. ಅದರಲ್ಲಿ ಏಳು ನಾಗರಿಕರು, ಮೂವರು ಅರೆ ಸೇನಾ ಸಿಬ್ಬಂದಿ ಮತ್ತು ಮೂವರು ಭಯೋತ್ಪಾದಕರು ಮೃತಪಟ್ಟಿದ್ದರು.

ಈ ಕಟ್ಟಡ ಶ್ರೀನಗರದಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಈ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Comments are closed.