ರಾಷ್ಟ್ರೀಯ

ಮುಸ್ಲಿಮರ ಟ್ರಿಪಲ್ ತಲಾಖ್ ಗೆ ಕೇಂದ್ರ ಅಸಮಾಧಾನ

Pinterest LinkedIn Tumblr

talak-Muslimನವದೆಹಲಿ (ಅ.07): ಮುಸಲ್ಮಾನ ಸಮುದಾಯದಲ್ಲಿರುವ ಪರಿಪಾಠ ತ್ರಿವಳಿ ವಿಚ್ಚೇದನವನ್ನು (ಟ್ರಿಪಲ್ ತಲಾಖ್) ಕೇಂದ್ರ ವಿರೋಧಿಸಿದ್ದು ಇದು ಜಾತ್ಯಾತೀತ ದೇಶದಲ್ಲಿ ಸೂಕ್ತವಲ್ಲ ಎಂದು ಕೇಂದ್ರ ಹೇಳಿದೆ.
ದೇಶದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲೀಮರು ಅವರ ಧರ್ಮ ಸಂಹಿತೆಯಂತೆ ವಿವಾಹ, ವಿಚ್ಚೇದನ, ಧಾರ್ಮಿಕ ಆಚರಣೆಗಳನ್ನು ನಡೆಸಲು ಸಂವಿಧಾನ ಅವಕಾಶ ನೀಡಿತ್ತು. ಇದಕ್ಕೆ ಕೇಂದ್ರ ಅಸಮಾಧಾನ ವ್ಯಕ್ತಪಡಿಸಿದೆ.
ತ್ರಿವಳಿ ವಿಚ್ಚೇದನವು ಮಹಿಳೆಯರಿಗೆ ಆಗುವ ಅನ್ಯಾಯ. ಇದು ಸಮಂಜಸವಲ್ಲವೆಂದು ಕೇಂದ್ರ ಸುಪ್ರೀಂಗೆ ಹೇಳಿದೆ. ಈ ವಿಚಾರದಲ್ಲಿ ನ್ಯಾಯಾಧೀಶರು ಮಧ್ಯಪ್ರವೇಶಿಸುವುದು ಅವರಿಗೆ ಬಿಟ್ಟ ವಿಚಾರವಾಗಿದೆ.

Comments are closed.