ಕಲಹ ಹಿನ್ನೆಲೆಯಲ್ಲಿ ನಿವೃತ್ತ ಪೈಲಟ್ ಆನಂದ್ ಕುಮಾರ್ ಸಿಂಗ್ ಎಂಬುವರು ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೆಹಲಿಯ ಮಯೂರ್ ವಿಹಾರ್ ಪ್ರದೇಶದ ಮಾಲಿವಾ ಅಪಾರ್ಟ್ ಮೆಂಟ್ ನಲ್ಲಿ ಆನಂದ್ ಕುಮಾರ್ ಸಿಂಗ್ ಅವರು ನೆಲೆಸಿದ್ದು, ವಿದೇಶದಲ್ಲಿರುವ ತಮ್ಮ ಹಿರಿಯ ಪುತ್ರಿಯ ಭೇಟಿಗೆ ಸಂಬಂಧಿಸಿದಂತೆ ಪತ್ನಿ ಹಾಗೂ ಕಿರಿಯ ಮಗಳ ಜತೆ ಆನಂದ್ ಸಿಂಗ್ ಜಗಳವಾಡಿ ತಮ್ಮ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.
ಜಗಳದ ಬಳಿಕ ಆನಂದ್ ತಮ್ಮ ಪಿಸ್ತೂಲ್ ತೆಗೆದುಕೊಂಡು ಮೇಲ್ಘಾವಣಿಗೆ ಹೋಗಿ ಗುಂಡು ಹಾರಿಸಿದ್ದಾರೆ. ಇದರಿಂದ ಹೆದರಿದ ಪತ್ನಿ ಹಾಗೂ ಮಗಳು ಪಕ್ಕದ ಮನೆಗೆ ಓಡಿಹೋಗಿದ್ದರು. ಬಳಿಕ ಅರ್ಧಗಂಟೆ ಬಿಟ್ಟು ಬಂದು ನೋಡಿದರೆ ಆನಂದ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.