ಚೆನ್ನೈ (ಆ.02): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಆಸ್ಪತ್ರೆ ಸುತ್ತಮುತ್ತ 450ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಅಪೋಲೋ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಸಿಂಧೂರಿ ಬ್ಲಾಕ್ನ ICU ಕೊಠಡಿಯಲ್ಲಿ ಜಯಲಲಿತಾಗೆ ಚಿಕಿತ್ಸೆ ಕೊಡಲಾಗುತ್ತಿದೆ. ಆ ಅಂತಸ್ತಿನಲ್ಲಿ ಕೇವಲ ಜಯಲಲಿತಾರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಮಿಕ್ಕ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಾಧ್ಯಮಗಳಿಗೆ ಯಾರಾದರು ಫೋಟೋ ,ವಿಡಿಯೋ ಕೊಡಬಹುದೆಂಬ ಅನುಮಾನದಿಂದ ವೈದ್ಯರಿಗೂ ಮೊಬೈಲ್ ಸ್ಥಗಿತಗೊಳಿಸಲಾಗಿದೆ. ಯಾರು ಮೊಬೈಲ್ ಬಳಸಬಾರದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಕಟ್ಟುನಿಟ್ಟಾದ ಸೂಚನೆ ನೀಡಿದೆ.