ನವದೆಹಲಿ: ಇಂದಿನಿಂದ ನವರಾತ್ರಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಉಪವಾಸ ಆರಂಭಿಸಿದ್ದಾರೆ.
ಮಹಾನ್ ದೈವ ಭಕ್ತರಾಗಿರುವ ಮೋದಿ ಈ 9 ದಿನಗಳ ಕಾಲ ಕೇವಲ ಬಿಸಿನೀರು ಮಾತ್ರ ಸೇವಿಸುತ್ತಾರೆ. ಶನಿವಾರ ನವರಾತ್ರಿ ಆರಂಭವಾಗಿದ್ದು, ಅದರ ಪ್ರಯುಕ್ತ ಉಪವಾಸ ನಡೆಸುವ ಮೋದಿ ಮುಂದಿನ 9 ದಿನ ಯಾವುದೇ ಆಹಾರ ಸೇವಿಸದೇ ನೀರನ್ನು ಮಾತ್ರ ಕುಡಿಯುತ್ತಾರೆ.
ನವರಾತ್ರಿಯ ಈ ಸಂದರ್ಭದಲ್ಲಿ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಈ ಬಾರಿ ಅಕ್ಟೋಬರ್ 11 ರವರೆಗೆ ದಸರಾ ಆಚರಣೆ ನಡೆಯುತ್ತದೆ. ಈ 9 ದಿನ ನವದುರ್ಗೆಯರ ಆರಾಧನೆ ವಿಜೃಂಭಣೆಯಿಂದ ನಡೆಯುತ್ತದೆ.
Comments are closed.