ರಾಷ್ಟ್ರೀಯ

ಭಾರತೀಯ ಸೇನೆಯ ದಾಳಿ ಹೇಗಿತ್ತು?

Pinterest LinkedIn Tumblr

indian-armyಬೆಂಗಳೂರು(ಸೆ. 29): ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದ ಘಟನೆಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅನೇಕ ಉಗ್ರರ ಕ್ಯಾಂಪ್’ಗಳನ್ನು ಭಾರತೀಯ ಯೋಧರು ಧ್ವಂಸ ಮಾಡಿದ್ದಾರೆ. ಸುಮಾರು 35 ಉಗ್ರರನ್ನು ಹತ್ಯೆಗೈದಿದ್ದಾರೆ. ಬಹಳ ಕರಾರುವಾಕ್ಕಾಗಿದ್ದ ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿತ್ತು..? ವಿವರ ಇಲ್ಲಿದೆ.
ಕಾರ್ಯಾಚರಣೆ ಹೇಗಿತ್ತು?
* ಗಡಿ ದಾಟಿ ಉಗ್ರರನ್ನು ಹೊಡೆಯಲೆಂದೇ ವಿಶೇಷ ತಂಡ ರಚನೆಯಾಯ್ತು
ಪಿಓಕೆಯಿಂದ ಉಗ್ರರನ್ನು ಒಳನುಸುಳುವ ಪ್ರದೇಶಗಳ ಖಚಿತ ಮಾಹಿತಿ ಸಂಗ್ರಹಿಸಲಾಯ್ತು
ಒಟ್ಟು 8 ಕ್ಯಾಂಪ್’ಗಳ ಸಂಪೂರ್ಣ ಡೀಟೇಲ್ಸ್, ಮ್ಯಾಪ್ ಮಿಲಿಟರಿ ಬಳಿ ಇತ್ತು
ಮಧ್ಯರಾತ್ರಿ 12.30ರಿಂದ ಬೆಳಗ್ಗೆ 4.30ರ ಮಧ್ಯೆ ಸೈನಿಕರು ಗಡಿ ದಾಟಿ ನುಗ್ಗಿದರು
ಪಾಕ್ ಆಕ್ರಮಿತ ಕಾಶ್ಮೀರದ 2 ಕಿ.ಮೀ. ಪ್ರದೇಶದ, 500 ಮೀ. ವ್ಯಾಪ್ತಿಯಲ್ಲಿ ಉಗ್ರರನ್ನು ಟಾರ್ಗೆಟ್ ಮಾಡಿದರು
ಹೈಅಲರ್ಟ್:
ಗಡಿಭಾಗದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ ಸಂದೇಶ
ಮುನ್ನೆಚ್ಚರಿಕೆ ಕ್ರಮವಾಗಿ ಗಡಿಭಾಗದ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಕ್ಕೆ ಕೇಂದ್ರ ಸೂಚನೆ
ರಕ್ಷಣಾ ಸಚಿವಾಲಯದಿಂದ ಗಡಿ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್ಗಳಲ್ಲಿ ರೆಡ್ ಅಲರ್ಟ್
ಪಂಜಾಬ್’ನಲ್ಲಿ ಪಾಕ್ ಗಡಿಯಿಂದ 10 ಕಿ.ಮೀ. ದೂರದವರೆಗಿನ ಸ್ಥಳಗಳಿಂದ ಜನರ ಸ್ಥಳಾಂತರ
ಗಡಿ ಪ್ರದೇಶಗಳಿಗೆ ಹೆಚ್ಚುವರಿ ಭದ್ರತಾ ಪಡೆ ರವಾನೆ
ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ಸರ್ವಪಕ್ಷ ಸಭೆ

Comments are closed.