ರಾಷ್ಟ್ರೀಯ

ಆಸ್ಪತ್ರೆಯಲ್ಲೇ ಮಾಂತ್ರಿಕನಿಂದ ಗರ್ಭಿಣಿಗೆ ಥಳಿತ

Pinterest LinkedIn Tumblr

garbiniಲಕ್ನೋ: ದೆವ್ವ ಹಿಡಿದಿದೆಯೆಂದು ಮನಬಂದಂತೆ ಮಾಂತ್ರಿಕನೊಬ್ಬ ಗರ್ಭಿಣಿಗೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲೇ ನಡೆದಿದೆ.

ಹೌದು. ಉತ್ತರ ಪ್ರದೇಶದ ಬುಂದೇಲ್‍ಖಂಡ್‍ನ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಗರ್ಭಿಣಿಯೊಬ್ಬರಿಗೆ ದೆವ್ವ ಬಿಡಿಸುವುದಾಗಿ ಮಾಂತ್ರಿಕ ಥಳಿಸಿದ್ದಾನೆ.

ಕೇವಲ ಮಾಂತ್ರಿಕ ಮಾತ್ರವಲ್ಲದೇ ಕುಟುಂಬಸ್ಥರು ಕೂಡ ಇದಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಅವರು ಕೂಡ ಗರ್ಭಿಣಿಯನ್ನ ಹಿಡಿದು ಥಳಿಸುತ್ತಿದ್ದ ದೃಶ್ಯಗಳು ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಗಿದ್ದೇನು?: ದೆವ್ವ ಹಿಡಿದಿದೆ ಎನ್ನಲಾಗಿದ್ದ ಗರ್ಭಿಣಿಗೆ ಮಾಂತ್ರಿಕ ಕೆನ್ನೆಗೆ ಹೊಡೆದಿದ್ದು, ಆಕೆಯ ಕೂದಲನ್ನ ಹಿಡಿದೆಳೆದು ಹಿಂಸಿಸಿದ್ದಾನೆ. ಗರ್ಭಿಣಿಗೆ ಥಳಿಸುತ್ತಿರುವುದನ್ನು ಆಸ್ಪತ್ರೆಯ ನೌಕರರು ನೋಡುತ್ತಿದ್ದರೂ ಅವರು ಆಕೆಯನ್ನು ರಕ್ಷಿಸಲು ಮುಂದಾಗದೇ ಇರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments are closed.