ರಾಷ್ಟ್ರೀಯ

ಮೋದಿ ‘ಮನ್ ಕಿ ಬಾತ್’ ನಲ್ಲಿ ಹೇಳಿದ್ದು ಹೀಗೆ….

Pinterest LinkedIn Tumblr

modi

ನವದೆಹಲಿ: ಸೇನೆ ಮಾತನಾಡುವುದಿಲ್ಲ, ತನ್ನ ಶೌರ್ಯವನ್ನು ತನ್ನ ಕೃತಿಯ ಮೂಲಕ ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು. ತಮ್ಮ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ವಿಭಾಗದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪ್ರಸ್ತಾಪಿಸುತ್ತಾ ಸೂಚ್ಯವಾಗಿ ಈ ಮಾತು ಹೇಳಿದರು.

ರಾಜಕಾರಣಿಗಳು ಮಾತನಾಡುತ್ತಾರೆ, ಆದರೆ ಸೈನಿಕರು ಅತ್ಯುನ್ನತ ಧೈರ್ಯವನ್ನು ಪ್ರದರ್ಶಿಸುವ ಮೂಲಕ ದೇಶ ರಕ್ಷಣೆ ಮಾಡುತ್ತಾರೆ, ನಮ್ಮ ಸೇನೆಯ ಮೇಲೆ ನಮಗೆ ಹೆಮ್ಮೆ ಇದೆ. ಉರಿ ಸೇನಾ ನೆಲೆ ಮೇಲೆ ದಾಳಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಅವರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ಕುರಿತು ದೇಶದಾದ್ಯಂತ ಜನರಲ್ಲಿ ಸಾಕಷ್ಟು ಆಕ್ರೋಶವಿದೆ. ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ಉರಿ ದಾಳಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಯಾಗುತ್ತಿದ್ದು, ಶೀಘ್ರ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ. ಕಣಿವೆ ರಾಜ್ಯದಲ್ಲಿ ಮತ್ತೆ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಮೋದಿ ತಿಳಿಸಿದರು.

ಸ್ವಚ್ಛಭಾರತ ಕಾರ್ಯಕ್ರಮ ಸೇರಿದಂತೆ ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಬಗೆಗೂ ಮಾತನಾಡಿದ ಅವರು ದಿವ್ಯಾಂಗರು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟದ್ದನ್ನು ಸ್ಮರಿಸಿ ಅವರನ್ನು ಶ್ಲಾಘಿಸಿದರು.

Comments are closed.