ರಾಷ್ಟ್ರೀಯ

ಸಿಗದ ವ್ಹೀಲ್ ಚೇರ್ …ಬೈಕ್ ನಲ್ಲಿಯೇ ರೋಗಿಯನ್ನು ಆಸ್ಪತ್ರೆಯೊಳಗೆ ಕರೆದೊಯ್ದ ಯುವಕ !

Pinterest LinkedIn Tumblr

pati

ಮಧ್ಯಪ್ರದೇಶ: ವ್ಹೀಲ್ ಚೇರ್ ಸಿಗದ ಕಾರಣ ರೋಗಿಯೊಬ್ಬರನ್ನು ಬೈಕ್ ನಲ್ಲಿಯೇ ಆಸ್ಪತ್ರೆಯೊಳಗೆ ಕರೆದುಕೊಂಡು ಹೋದ ಘಟನೆ ನಡೆದಿದೆ. 3 ಈಡಿಯಟ್ಸ್ ಸಿನೆಮಾದಲ್ಲಿ ಆಮಿರ್ ಖಾನ್ ಸ್ನೇಹಿತನ ತಂದೆಯನ್ನು ಸ್ಕೂಟಿಯಲ್ಲಿ ಆಸ್ಪತ್ರೆಯೊಳಗೆ ಕರೆದುಕೊಂಡು ಹೋದ ರೀತಿಯೇ ಈ ಘಟನೆ ನಡೆದಿದೆ.

ಮಧ್ಯಪ್ರದೇಶ ಯುವಕನೊಬ್ಬ ತೀವ್ರ ಜ್ವರದಿಂದ ಬಳಲುತ್ತಿದ್ದ ತನ್ನ ಅಜ್ಜಿಯನ್ನು ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದಾನೆ. ಆಸ್ಪತ್ರೆಯ ಒಳಗೆ ಕರೆದೊಯ್ಯಲು ಗಾಲಿ ಕುರ್ಚಿಯನ್ನು ನೀಡುವಂತೆ ಸಿಬ್ಬಂದಿಯನ್ನು ಕೇಳಿದ್ದಾನೆ. ಆದರೆ ವ್ಹೀಲ್ ಚೇರ್ ಸಿಗದ ಕಾರಣ ಆತ ಬೈಕ್ ನಲ್ಲೇ ಆಸ್ಪತ್ರೆಯೊಳಗೆ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾನೆ.

ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಸೆರೆ ಹಿಡಿದಿದ್ದಾರೆ. ಅಜ್ಜಿಯನ್ನು ಆಸ್ಪತ್ರೆಯೊಳಗೆ ಕರೆದುಕೊಂಡು ಹೋದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆದರೆ ಸ್ಥಳಕ್ಕೆ ಮಾಧ್ಯಮದವರು ಬರುತ್ತಿದ್ದಂತೆ ವೈದ್ಯರು ವೃದ್ಧೆಗೆ ಚಿಕಿತ್ಸೆ ನೀಡಿದ್ದಾರೆ.

Comments are closed.