ನವದೆಹಲಿ: ಉದಯೋನ್ಮುಖ ಟೆನಿಸ್ ಆಟಗಾರ್ತಿ ರುಚಿಕಾ ಗಿರೋತ್ರಾ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹರಿಯಾಣದ ಮಾಜಿ ಡಿಜಿಪಿ ಎಸ್ ಪಿ ಎಸ್ ರಾಠೋಡ್ ಅಪರಾಧಿ ಎಂದಿದ್ದ ಹೈಕೋರ್ಟ್ ತೀರ್ಪನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಎಂ.ಬಿ.ಲೋಕುರ್ ನೇತೃತ್ವದ ಸುಪ್ರೀಂ ಪೀಠ, ರಾಠೋಡ್ ಜೈಲು ಶಿಕ್ಷೆಯನ್ನು ಎತ್ತಿಹಿಡಿದ್ದು, ಅಪರಾಧಿ ಈಗಾಗಲೇ ಕಳೆದಿರುವ 6 ತಿಂಗಳ ಜೈಲು ವಾಸವನ್ನು ಲೆಕ್ಕಿಸಿ, ಆತನಿಗೆ ನೀಡಲಾಗಿರುವ 18 ತಿಂಗಳ ಜೈಲು ಶಿಕ್ಷೆಯ ಅವಧಿಯಲ್ಲಿ 6 ತಿಂಗಳು ಕಳೆದಿರುವುದು ರಾಠೊಡ್ ಪಾಲಿಗೆ ದಕ್ಕಿರುವ ಸಣ್ಣ ಮಟ್ಟದ ರಿಲೀಫ್ ಆಗಿದೆ.
1990ರ ಆಗಸ್ಟ್ 20ರಂದು, ಹರಿಯಾಣ ಪೊಲೀಸ್ ಐಜಿಪಿ ಹಾಗೂ ಹರಿಯಾಣ ಲಾನ್ ಟೆನಿಸ್ ಅಸೋಸಿಯೇಶನ್ನ ಅಧ್ಯಕ್ಷರಾಗಿದ್ದ ರಾಠೊಡ್, ಆಗ 14 ವರ್ಷ ಪ್ರಾಯದವಳಾಗಿದ್ದ ಉದಯೋನ್ಮುಖ ಟೆನಿಸ್ ಆಟಗಾತಿ ರುಚಿಕಾಗೆ, ಪಂಚಕುಲದಲ್ಲಿನ ಎಚ್ಎಲ್ಟಿಎ ಕಚೇರಿಯಲ್ಲಿ, ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆಪಾದನೆಗೆ ಗುರಿಯಾಗಿದ್ದರು.
ರುಚಿಕಾ ಆ ಕೂಡಲೇ ರಾಠೊಡ್ ವಿರುದ್ಧ ತನ್ನ ಮೇಲಿನ ಲೈಂಗಿಕ ಕಿರುಕುಳದ ದೂರನ್ನು ದಾಖಲಿಸಿದ್ದಳು. ಇದರ ಪರಿಣಾಮವಾಗಿ, ರಾಠೋಡ್ ನ ಪುತ್ರಿಯ ಕ್ಲಾಸ್ಮೇಟ್ ಆಗಿದ್ದ ರುಚಿಕಾಳನ್ನು, ಅಶಿಸ್ತಿನ ನಡತೆಗಾಗಿ ಶಾಲೆಯಿಂದಲೇ ವಜಾ ಮಾಡಲಾಗಿತ್ತು. ರಾಠೋಡ್ ಕುಮ್ಮಕ್ಕಿನಿಂದಾಗಿ ಹರಿಯಾಣ ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರುಚಿಕಾ ಳ ಮನೆಯವರು ಆಪಾದಿಸಿದ್ದರು.
1993ರ ಡಿಸೆಂಬರ್ 28ರಂದು ರುಚಿಕಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮರುದಿನ ಮೃತಪಟ್ಟಿದ್ದಳು.
ರುಚಿಕಾ ಳಿಗೆ ಲೈಂಗಿಕ ಕಿರುಕುಳ ನೀಡಿದ 22 ವರ್ಷಗಳ ತರುವಾಯ, 2009ರ ಡಿಸೆಂಬರ್ನಲ್ಲಿ, ಚಂಡೀಗಢ ನ್ಯಾಯಾಲಯವು ರಾಠೋಡ್ ಅಪರಾಧಿ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಎತ್ತಿ ಹಿಡಿದಿತ್ತು. ಪರಿಣಾಮವಾಗಿ ರಾಠೊಡ್ನನ್ನು 18 ತಿಂಗಳ ಕಠಿನ ಜೈಲು ಶಿಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಐದು ತಿಂಗಳು ಶಿಕ್ಷೆ ಅನುಭವಿಸಿದ್ದ ಸಂದರ್ಭದಲ್ಲಿ ಆತನಿಗೆ, ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ರಾಷ್ಟ್ರೀಯ
Comments are closed.